ಉಡುಪಿ: ಮಣಿಪಾಲ ಟೈಗರ್ ಸರ್ಕಲ್ ಬಳಿ ಹಳೆಯ ಟ್ಯಾಂಕ್‌ ನೆಲಸಮ; ನಗರಸಭೆಯಿಂದ ಕಾರ್ಯಾಚರಣೆ!

  • 08 Apr 2025 08:03:53 PM


ಉಡುಪಿ: ಮಣಿಪಾಲದ ಟೈಗರ್ ಸರ್ಕಲ್ ಬಳಿಯ ಕೆನರಾ ಬ್ಯಾಂಕ್ ಸರ್ಕಲ್ ಹತ್ತಿರದ ಸುಮಾರು ಐದು ದಶಕಗಳ ಹಿಂದಿನ ಶಿಥಿಲಾವಸ್ಥೆಯ ಕುಡಿಯುವ ನೀರಿನ ಟ್ಯಾಂಕ್‌ನ್ನು ಮಂಗಳವಾರ ಧ್ವಂಸಗೊಳಿಸಲಾಯಿತು.

 

ಉಡುಪಿ ನಗರಸಭೆಯ ಆದೇಶದಂತೆ, ಮೂರು ಕ್ರೇನ್‌ಗಳ ಸಹಾಯದೊಂದಿಗೆ ಈ ಟ್ಯಾಂಕ್‌ನ್ನು ನೆಲಸಮಗೊಳಿಸಲಾಯಿತು.

 

 ಕಾರ್ಯಾಚರಣೆಯ ವೇಳೆ ಸಾರ್ವಜನಿಕರ ಸುರಕ್ಷತೆಗಾಗಿ ಸ್ಥಳದಲ್ಲಿ ಪೊಲೀಸ್ ಇಲಾಖೆಯು ಬಿಗಿ ಬಂದೋಬಸ್ತ್ ನ ಏರ್ಪಾಡು ಮಾಡಲಾಗಿತ್ತು.

 

ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಟೈಗರ್ ಸರ್ಕಲ್, ಕೆನರಾ ಬ್ಯಾಂಕ್ ಸರ್ಕಲ್ ಹಾಗೂ ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿ ವಾಹನ ಸಂಚಾರವನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನದವರೆಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿತ್ತು.