ಕೇರಳ: ಪೌಷ್ಟಿಕ ಪಕ್ಷಾಚರಣೆ ಅಂಗವಾಗಿ ಕೇರಳ ಕೇಂದ್ರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಜಾಗೃತಿ ರಾಲಿ ನಡೆಸಿದರು.
ಉಪಕುಲಪತಿ ಪ್ರೊ. ಸಿದ್ದು ಪಿ. ಆಲ್ ಗುಲ್ ಪತಾಕೆ ಬೀಸುವ ಮೂಲಕ ರಾಲಿಗೆ ಚಾಲನೆಯನ್ನು ನೀಡಿದರು.
ವಿದ್ಯಾರ್ಥಿಗಳು ಪೌಷ್ಟಿಕ ಆಹಾರದ ಮಹತ್ವವನ್ನು ಸಾರುವ ಘೋಷಣಾ ಫ್ಲೆಕ್ಸ್‌ಗಳೊಂದಿಗೆ ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ಎಂ. ಮುರಳೀಧರನ್ ನಂಬ್ಯಾರ್, ಡಾ. ಆರ್. ಜಯಪ್ರಕಾಶ್, ಪ್ರೊ. ರಾಜೇಂದ್ರ ಪಿಲಾಂಕಟ್ಟೆ, ಡಾ. ಎಸ್. ಅಂಬಳಗಿ, ಡಾ. ಗುಜ್ಜೇಟ್ಟಿ ಹಾಗೂ ಒ. ವಿಷ್ಣುಪ್ರಸಾದ್ ಉಪಸ್ಥಿತರಿದ್ದರು.
ಕೇಂದ್ರ ವನಿತಾ ಮತ್ತು ಶಿಶುಕ್ಷೇಮ ಅಭಿವೃದ್ಧಿ ಮಂತ್ರಾಲಯದ ನಿರ್ದೇಶನದಂತೆ ಏಪ್ರಿಲ್ 8ರಿಂದ 23ರವರೆಗೆ ಪೌಷ್ಟಿಕ ಪಕ್ಷಾಚರಣೆ ಆಯೋಜಿಸಲಾಗಿದೆ.
ಈ ಹಿನ್ನಲೆಯಲ್ಲಿ ಮಕ್ಕಳ ಪೌಷ್ಟಿಕತೆಯ ಕೊರತೆ, ಅಮಿತ ಬೊಜ್ಜು ಮುಂತಾದ ವಿಷಯಗಳ ಕುರಿತು ವಿವಿಧ ತಿಳುವಳಿಕಾ ಕಾರ್ಯಕ್ರಮಗಳು ನಡೆಯಲಿವೆ.