ನಳಿನ್ ಕುಮಾರ್ ಕಟೀಲ್ ಅವರು ಭಾರತದ ಭಾರತೀಯ ಜನತಾ ಪಕ್ಷದ (BJP) ಮಂಗಳೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜನಪ್ರಿಯ ಸಂಸದರಾಗಿದ್ದಾರೆ.
ಸಂಘ ಪರಿವಾರದಲ್ಲಿ ತನ್ನ ರಾಜಕೀಯ ಪಯಣವನ್ನು ಆರಂಭಿಸಿದ ಅವರು, ದಶಕಗಳಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಹೊಂದಿರುವವರಾಗಿದ್ದಾರೆ. ಸಂಘದ ಶಿಸ್ತಿನೊಂದಿಗೆ ಬೆಳೆದು, ಧರ್ಮ, ನಾಡು, ಮತ್ತು ಸಂಸ್ಕೃತಿಯ ಮೇಲೆ ಅಪಾರ ಪ್ರೀತಿ ಹೊಂದಿರುವ ವ್ಯಕ್ತಿತ್ವ ಹೊಂದಿದವರು.
ಪ್ರತಿಯೊಬ್ಬ ಹಿಂದೂ ಕಾರ್ಯಕರ್ತರ ಹೃದಯದಲ್ಲಿ ಸದಾ ನೆಲೆಯೂರಿರುವ ಹೆಸರೆಂದರೆ ಅದು ನಳಿನ್ ಕುಮಾರ್ ಕಟೀಲ್.
ಅವರು ಕೇವಲ ಚುನಾವಣೆಗೆ ಒಳಪಟ್ಟ ರಾಜಕಾರಣಿ ಅಲ್ಲ. ಅವರು ಹೃದಯದಿಂದ ಕಾರ್ಯಕರ್ತ. ಯಾವುದೆ ಹುದ್ದೆಯಲ್ಲಿದ್ದರೂ ಸಹ, ಅವರ ನಡವಳಿಕೆಯೇ ಜನಮನಸ್ಸನ್ನು ಗೆದ್ದಿರುವಂತಹದ್ದು. ಹಿಂದೂ ಕಾರ್ಯಕರ್ತರಿಗೆ ಆಗಲಿ ಅಥವಾ ಯಾರಿಗೇ ಸಮಸ್ಯೆ ಎಂದು ಹೇಳಿ ಬಂದಲ್ಲಿ ಸಹಾಯಕ್ಕೆ ತಕ್ಷಣ ಸ್ಪಂದಿಸುವ ಸದುಡುಪಿನ ವ್ಯಕ್ತಿತ್ವ ಹೊಂದಿರುವ ಜನರ ನೆಚ್ಚಿನ ಸಂಸದರಿವರು. ಸ್ಪಷ್ಟವಾದ ನೇರ ನಡೆ ನುಡಿ ಇದುವೇ ಅವರ ಮೇಲೆ ಕಾರ್ಯಕರ್ತರ ನಡುವೆ ಅಪಾರ ವಿಶ್ವಾಸಕ್ಕೇ ಕಾರಣವಾಗಿರುವಂತಹದ್ದು.
ಅವರು ಬಡಜನರ ಸಮಸ್ಯೆಗಳ ಬಗ್ಗೆ ಗಂಭೀರವಾಗಿರುವಂತೆ, ಸಂಘದ ಮೌಲ್ಯಗಳನ್ನು ಜೀವಮಾನಪೂರ್ಣವಾಗಿ ಪಾಲಿಸುತ್ತಿದ್ದಾರೆ. ಧರ್ಮನಿಷ್ಠೆ, ದೇಶಭಕ್ತಿ ಮತ್ತು ಜನಸಾಮಾನ್ಯರ ಸೇವೆ ಇವರ ರಾಜಕೀಯದ ತ್ರಿಸೂತ್ರ.
ಅವರನ್ನು ಮೆಚ್ಚಿದ ಅವರನ್ನು ಆರಾಧಿಸುವ ಹಿಂದೂ ಕಕಾರ್ಯಕರ್ತರು ಹೀಗೆ ಹೇಳುತ್ತಾರೆ:
“ಅವರು ಇಲ್ಲದೆ ನಮ್ಮ ಧ್ವನಿ ಕೇಳಿಸೋದಿಲ್ಲ, ಅವರು ಇದ್ದರೆ ನಮ್ಮ ಧೈರ್ಯ ಕುಗ್ಗೋದಿಲ್ಲ.”
ಇವು ನಳಿನ್ ಕುಮಾರ್ ಕಟೀಲ್ ಅವರ ಮೇಲಿನ ನಿಷ್ಠೆಯ ಸಾಕ್ಷಾತ್ ಚಿಹ್ನೆಗಳಾಗಿದ್ದೇವೆ ಎಂದು.
ಇವರು ನಿಜಕ್ಕೂ ಈ ಕಾಲಘಟ್ಟದ ನಿಷ್ಠಾವಂತ, ಧೈರ್ಯವಂತ ನಾಯಕ. ಕಾರ್ಯಕರ್ತನ ಕನಸು, ಕಷ್ಟ, ಆಶೆ – ಎಲ್ಲದರಿಗೂ ಸ್ಪಂದಿಸುವ ಜೀವಂತ ಶಕ್ತಿ.
✍️ಕೃಷ್ಣ ರಾಜ - ಮಂಗಳೂರು