ಉಡುಪಿ: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಮಂದಾರ್ತಿಯ ಮಾನ್ಯಾ ಎಸ್. ಪೂಜಾರಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾಳೆ.
ತಂದೆಯನ್ನು ಚಿಕ್ಕವಯಸ್ಸಿನಲ್ಲಿ ಕಳೆದುಕೊಂಡ ಈಕೆ , ಶೇ. 95.16 ಅಂಕಗಳನ್ನು ಗಳಿಸಿ ಎಲ್ಲರಿಗೂ ಸ್ಪೂರ್ತಿಯಾಗಿದ್ದಾಳೆ.
ಮಾನ್ಯಾ ಉಡುಪಿ ಜಿಲ್ಲೆಯ ಮಂದಾರ್ತಿಯ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಪೂರ್ವ ವಿಶ್ವವಿದ್ಯಾಲಯ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದಾಳೆ.
ಈಕೆಯ ತಾಯಿ ಗೋಡಂಬಿ ಕಾರ್ಖಾನೆಯಲ್ಲಿ ದಿನಗೂಲಿ ಕಾರ್ಮಿಕೆಯಾಗಿದ್ದು, ಇಬ್ಬರು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಬೆಂಬಲವಾಗಿ ನಿಂತಿದ್ದಾರೆ.
ಯಾವುದೇ ಖಾಸಗಿ ಟ್ಯೂಷನ್ನ ಸಹಾಯವಿಲ್ಲದೆ, ಮಾನ್ಯಾ ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಮಾತ್ರ ಓದಿ, ತನ್ನ ಪರಿಶ್ರಮದ ಮೂಲಕ ಇಷ್ಟು ಶ್ರೇಷ್ಟ ಅಂಕಗಳನ್ನು ಗಳಿಸಿದ್ದಾಳೆ.
ಅವಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿಯವರು ಅಭಿನಂದನೆ ಸಲ್ಲಿಸಿದ್ದು, ಅವಳು ಸಂಸ್ಥೆಯ ಹೆಮ್ಮೆ ಎನಿಸಿದ್ದಾಳೆ ಎಂದು ಕೊಂಡಾಡಿದ್ದಾರೆ.
ಮಾನ್ಯಾ ಈಗ ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಕಲಿಯಲು ಮುಂದಾಗಿದ್ದು, ಈಗಾಗಲೇ ಆ ದಿಕ್ಕಿನಲ್ಲಿ ತನ್ನ ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ. ದೃಢ ನಿಶ್ಚಯ, ತಾಯಿಯ ತ್ಯಾಗ ಮತ್ತು ಆತ್ಮವಿಶ್ವಾಸವೊಂದಿದ್ದಾರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ನಿರೂಪಿಸುವುದಕ್ಕೆ ಇದೆ ಪ್ರತ್ಯಕ್ಷ ಸಾಕ್ಷಿ.