ಹೋಟೆಲ್‌, ಅಂಗಡಿ, ಪ್ರಯಾಣಕ್ಕೆ ಆಧಾರ್ ಅವಶ್ಯಕತೆ ಇಲ್ಲ; ಫೇಸ್ ಐಡಿ ಮೂಲಕ ಆಧಾರ್ ಪರಿಶೀಲನೆ: ಡಿಜಿಟಲ್ ತಂತ್ರಜ್ಞಾನಕ್ಕೆ ಹೊಸ ಆಯಾಮ!

  • 10 Apr 2025 10:03:07 AM

ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಡಿರುವ ಮಹತ್ವದ ಘೋಷಣೆಯಂತೆ, ಇನ್ನು ಮುಂದೆ ಹೋಟೆಲ್‌ಗಳಲ್ಲಿ, ಅಂಗಡಿಗಳಲ್ಲಿ ಅಥವಾ ಪ್ರಯಾಣ ಮಾಡುವ ವೇಳೆ ಆಧಾರ್‌ ಕಾರ್ಡ್‌ನ ಫೋಟೋ ಪ್ರತಿಯನ್ನು ನೀಡುವ ಅವಶ್ಯಕತೆ ಇಲ್ಲದಾಗಿದೆ. 

 

ಈ ಹೆಜ್ಜೆಯು ಜನಸಾಮಾನ್ಯರ ಗೌಪ್ಯತೆ ಮತ್ತು ದಸ್ತಾವೇಜುಗಳ ಸುರಕ್ಷತೆಯ ಕಡೆಗೆ ಪ್ರಮುಖ ಮುನ್ನಡೆ ಆಗಿದೆ. ಭವಿಷ್ಯದಲ್ಲಿ ಮುಂಬರುವ ಎಲ್ಲಾ ಪರಿಶೀಲನೆಗಳನ್ನು ಡಿಜಿಟಲ್ ಮಾಧ್ಯಮದ ಮೂಲಕವೇ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ.

 

ಆಧಾರ್‌ ಕಾರ್ಡ್ ಡಿಜಿಟಲ್ ಪರಿಶೀಲನೆಗಾಗಿ ಕೇಂದ್ರ ಸರ್ಕಾರ ಹೊಸ ಆಧಾರ್ ಅಪ್ಲಿಕೇಶನ್‌ ಅನ್ನು ಪರಿಚಯಿಸಿದೆ. ಇದನ್ನು ಅಶ್ವಿನಿ ವೈಷ್ಣವ್ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಕಟಿಸಿರುವ ವೀಡಿಯೋ ಮೂಲಕ ಅನಾವರಣಗೊಳಿಸಿದ್ದಾರೆ. 

 

ಈ ಅಪ್ಲಿಕೇಶನ್‌ ಬಳಕೆದಾರನ ನಿಯಂತ್ರಣ ಮತ್ತು ಗೌಪ್ಯತೆಯನ್ನು ಪ್ರಾಮುಖ್ಯತೆಯಿಂದ ಪರಿಗಣಿಸಿದೆ. ಇದೀಗ ಈ ಅಪ್ಲಿಕೇಶನ್‌ ಬೀಟಾ ಹಂತದಲ್ಲಿದ್ದು, ಫೇಸ್ ಐಡಿ ದೃಢೀಕರಣದ ಮೂಲಕ ಭದ್ರತೆಗೆ ಒತ್ತು ನೀಡುತ್ತಿದೆ.

 

ಬಳಕೆದಾರರು ಈಗ ಕೇವಲ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತಮ್ಮ ಆಧಾರ್ ಮಾಹಿತಿಯನ್ನು ಸುರಕ್ಷಿತವಾಗಿ ಹಂಚಿಕೊಳ್ಳಬಹುದು.

 

 ಈ ತಂತ್ರಜ್ಞಾನದಿಂದ ಜೆರಾಕ್ಸ್ ಕಾಪಿಗಳ ಅವಶ್ಯಕತೆಯನ್ನು ಕಡಿಮೆಮಾಡುತ್ತದೆ ಮತ್ತು ಪ್ರಕ್ರಿಯೆ ಬಹಳ ವೇಗವಾಗಿ, ಸುಲಭವಾಗಿ upi ಪೇಮೆಂಟುಗಳ ನಡೆಯುತ್ತದೆ.