ಬೆಂಗಳೂರು: ಅನ್ಯಕೋಮಿನ ಯುವತಿಯೋರ್ವಳು ತನ್ನ ಸ್ನೇಹಿತನ ಜೊತೆಗೆ ಬೈಕ್‌ನಲ್ಲಿ ಕುಳಿತಿದ್ದಕ್ಕಾಗಿ ಕೆಲವು ಪುಂಡರ ಗ್ಯಾಂಗ್ ಕಿರುಕುಳ ನೀಡಿ, ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಾಲೇಜು ವಿದ್ಯಾರ್ಥಿನಿ ಸ್ನೇಹಿತನ ಬೈಕ್‌ನಲ್ಲಿ ಕುಳಿತಿದ್ದ ಸಂದರ್ಭದಲ್ಲಿ, ಸ್ಥಳಕ್ಕೆ ಬಂದ ಗ್ಯಾಂಗ್‌ನವರು "ಕಾಲೇಜಿಗೆ ಹೋಗೋದಿಲ್ಲವೇ? ಇಲ್ಲಿ ಏಕೆ ಕೂತಿದಿಯಾ? ನಿನ್ನ ಅಪ್ಪ-ಅಮ್ಮನ ನಂಬರ್ ಕೊಡು.."ನೀನು ಮುಸ್ಲಿಂ ಆಗಿ ಇಂತದ್ದನ್ನು ಮಾಡ್ತಿಯಾ? ಎಂದೆಲ್ಲ ಕೇಳಿ ಎಂದು ಕೇಳಿ ಕಿರುಕುಳ ನೀಡಿದರು. ಜೊತೆಗೆ ಯುವತಿಯ ಜೊತೆಯಲ್ಲಿದ್ದ ಅವಳ ಗೆಳೆಯನಿಗೆ ನಿಂದಿಸಿ, ಹಲ್ಲೆ ನಡೆಸಿದ್ದಾರೆ.
ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲಾಗಿದ್ದು ಪೊಲೀಸರ ಗಮನಸೆಳೆಯಲಾಗಿದೆ. ಪೊಲೀಸರು ಈಗಾಗಲೇ ವಿಡಿಯೋ ಆಧಾರದಲ್ಲಿ ತನಿಖೆ ಆರಂಭಿಸಿ, ಆರೋಪಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದಾರೆ.