ಉಪ್ಪಳ: ಉಪ್ಪಳ ಪೇಟೆಯಲ್ಲಿ ಹೆದ್ದಾರಿ ಅಭಿವೃದ್ದಿ ಕಾಮಗಾರಿಯಿಂದ ದಿನನಿತ್ಯ ವಾಹನಗಳ ದಟ್ಟಣೆಯಿಂದ ಸಾರ್ವಜನಿಕರು ವ್ಯಾಪಕ ಸಮಸ್ಯೆಗೀಡಾಗುತ್ತಿದ್ದು, ಶೀಘ್ರದಲ್ಲಿ ಪ್ಲೆಓವರ್‌ನಲ್ಲಿ ಸಂಚಾರ ಆರಂಭಿಸದೇ ಇದ್ದಲ್ಲಿ ಇನ್ನಷ್ಟು ಸಂಕಷ್ಟವನ್ನು ಎದುರಿಸ ಬೇಕಾಗಬಹುದೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಸರ್ವೀಸ್ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದರಿಂದ ಹೆಚ್ಚಾಗಿ ಕಾಸರಗೋಡು-ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಕೈಕಂಬದಿಂದ ಉಪ್ಪಳ ಪೇಟೆ ತನಕ ಅರ್ಧ ಗಂಟೆ ಕೆಲವೊಮ್ಮೆ ಒಂದು ಗಂಟೆ ತನಕ ಕಾಯುವಂತ ಪರಿಸ್ಥಿತಿ ಉಂಟಾಗುತ್ತಿದೆ.
ಉಪ್ಪಳ ಹಾಗೂ ಪರಿಸರ ಪ್ರದೇಶದ ವಾಹನಗಳ ಸಹಿತ ಅನ್ಯ ರಾಜ್ಯಗಳ ಸಾವಿರಾರು ವಾಹನಗಳು ಸರ್ವೀಸ್ ರಸ್ತೆಯಲ್ಲಿಯೇ ಸಂಚರಿಸುತ್ತಿರುವುದು ದಟ್ಟಣೆಗೆ ಕಾರಣವಾಗಿದೆ. ಈಗಾಗಲೇ ಫ್ಲೈ ಓವರ್ ನ ಕೆಲಸಗಳು ಪೂರ್ತಿಗೊಂಡಿದ್ದು, ಅಂತಿಮಹಂತದ ಕೆಲಸಗಳು ಮಾತ್ರ ಬಾಕಿಯಿದ್ದು ಶೀಘ್ರ ಸಂಚಾರಕ್ಕೆ ಬಿಟ್ಟುಕೊಟ್ಟಲ್ಲಿ ಉಪ್ಪಳ ಪೇಟೆಯಲ್ಲಿ ಸುಗಮ ಸಂಚಾರವಾಗಲಿದೆ ಎಂದೂ ಇದಕ್ಕೆ ಸಂಬಂಧಪಟ್ಟ ಹೆದ್ದಾರಿ ಇಲಾಖೆ ಅಧಿಕಾರಿಗಳು ಕೂಡಲೇ ಪ್ರೈಓವರ್ ತೆರೆದುಕೊಡಬೇಕು ಎಂದು ಸಾರ್ವಜನಿಕರು ವಿನಂತಿಸಿದ್ದಾರೆ.