ಮಂದಾರ್ತಿ: ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕಿನಲ್ಲಿ ಪ್ರಸಿದ್ಧವಾದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಏಪ್ರಿಲ್ 12, 202 (ನಾಳೆ), ಶನಿವಾರದಂದು ಅಷ್ಟಪವಿತ್ರ ನಾಗಮಂಡಲೋತ್ಸವ ಭಕ್ತಿಭಾವದಿಂದ ಜರುಗಲಿದೆ.
ಈ ಪವಿತ್ರ ಮಹೋತ್ಸವವು ಆದಿ ಸುಬ್ರಹ್ಮಣ್ಯ ದೇವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ.
ದಿನದ ಕಾರ್ಯಕ್ರಮಗಳು ಮಧ್ಯಾಹ್ನ 12.00 ಗಂಟೆಗೆ ಮಹಾ ಅನ್ನ ಸಂತರ್ಪಣೆಯಿಂದ ಆರಂಭವಾಗಲಿದ್ದು, ನಂತರ ರಾತ್ರಿ 09.30ರಿಂದ ಹಾಲಿಟ್ಟು ಸೇವೆ ನಡೆಯಲಿದೆ.
ಪ್ರಮುಖ ಧಾರ್ಮಿಕ ವಿಧಿಯಾಗಿರುವ ಅಷ್ಟಪವಿತ್ರ ನಾಗಮಂಡಲೋತ್ಸವವು ರಾತ್ರಿ 11.30ರಿಂದ ಭಕ್ತಿಪೂರ್ಣ ವಾತಾವರಣದಲ್ಲಿ ನಡೆಯಲಿದೆ. ಸೇವೆಯ ನಂತರ ಎಲ್ಲ ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದೆ.
ಮಹೋತ್ಸವದ ಅಂಗವಾಗಿ ಇಂದು ದೇವಸ್ಥಾನದ ಆವರಣದಲ್ಲಿ ಹೋಮ, ಬಲಿಕರ್ಮ, ಆಶ್ಲೇಷ ಬಲಿ ಮುಂತಾದ ವೈದಿಕ ಕ್ರಿಯೆಗಳು ವಿಜೃಂಭಣೆಯಿಂದ ನಡೆಯುತ್ತಿವೆ.
ನಾಳೆ ಸಂಜೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಆಗಮಿಸಿ, ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಜೊತೆಗೆ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿಯವರು ಭಕ್ತರಲ್ಲಿ ಆಧ್ಯಾತ್ಮಿಕ ಅರಿವು ಮೂಡಿಸುವ ಧಾರ್ಮಿಕ ಉಪನ್ಯಾಸವನ್ನು ನೀಡಲಿದ್ದಾರೆ.
ಈ ಪವಿತ್ರ ಸಂದರ್ಭಡಾಲ್ಲಿ ದೇವಿ ದುರ್ಗಾಪರಮೇಶ್ವರಿಯ ಕೃಪೆಯಿಂದ ಸಮಸ್ತ ನಾಡಿಗೆ ಶಾಂತಿ, ಸಮೃದ್ಧಿ ಹಾಗೂ ಸೌಹಾರ್ದತೆಯನ್ನು ತರುವಂತೆ ಆಶಿಸಿ, ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಸ್ಥಳೀಯರು ಭಕ್ತಾಧಿಗಳನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದ್ದಾರೆ.