ಮಂಗಳೂರು: ಮಂಗಳೂರಿಗೆ ಕೇಂದ್ರೀಯ ಮೆರಿಟೈಮ್ ಯುನಿವರ್ಸಿಟಿ!; ಡಿಪಿಆರ್ ಶೀಘ್ರದಲ್ಲೇ ಕೇಂದ್ರಕ್ಕೆ ಸಲ್ಲಿಕೆ- ಕ್ಯಾ. ಬ್ರಿಜೇಶ್ ಚೌಟ!

  • 12 Apr 2025 02:36:49 PM


ಮಂಗಳೂರು: ದೇಶದ ಸಾಗರ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯ ಸಲುವಾಗಿ, ಮಂಗಳೂರಿನಲ್ಲಿ ಕೇಂದ್ರೀಯ ಮೆರಿಟೈಮ್ ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಕ್ರಿಯೆ ಮುಂದುವರಿಯುತ್ತಿದೆ. 

 

ಈ ಕುರಿತು ಸಿದ್ಧಪಡಿಸಲಾದ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಶೀಘ್ರದಲ್ಲೇ ಕೇಂದ್ರ ಶಿಪ್ಪಿಂಗ್ ಸಚಿವಾಲಯಕ್ಕೆ ಸಲ್ಲಿಸಲಾಗುವುದು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ತಿಳಿಸಿದ್ದಾರೆ.

 

ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ಮೆರಿಟೈಮ್ ಯುನಿವರ್ಸಿಟೀಸ್’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಮೆರಿಟೈಮ್ ವಿವಿಗೆ ಸ್ಥಾಪನೆಗೆ ಮಂಗಳೂರಿಗಿಂತ ಉತ್ತಮ ಸ್ಥಳ ಇನ್ನೊಂದಿಲ್ಲ. ವೀರರಾಣಿ ಅಬ್ಬಕ್ಕನ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯ ಸಂಕಲ್ಪವಿದೆ. ಇದರ ಡಿಪಿಆರ್ ಈಗಾಗಲೇ ಸಿದ್ಧವಾಗಿದ್ದು, ಶೀಘ್ರದಲ್ಲೇ ಕೇಂದ್ರಕ್ಕೆ ಸಲ್ಲಿಸಲಾಗುತ್ತದೆ, ಎಂದು ಹೇಳಿದರು.

 

ಮಂಗಳೂರು ನಗರವು ಬೃಹತ್ ಸಾಮುದ್ರಿಕ ಪೈಪೋಟಿಗೆ ರೆಡಿ ಆಗುತಿದ್ದು ಹಡಗು ನಿರ್ಮಾಣ ಮತ್ತು ದುರಸ್ತಿ ಕೈಗಾರಿಕೆಗಳ ಸ್ಥಾಪನೆಯ ಮೂಲಕ ಸ್ಥಳೀಯ ಆರ್ಥಿಕತೆಯ ಬೆಳವಣಿಗೆಗೆ ದಾರಿ ತೆರೆಯಬಹುದು.

 

 ಪ್ರಧಾನಿ ನರೇಂದ್ರ ಮೋದಿ ಅವರ ನಾವಿಕ ನಿಲಯ ಅಭಿವೃದ್ಧಿ ದೃಷ್ಟಿಕೋನಕ್ಕೆ ಅನುಗುಣವಾಗಿ, ಇತ್ತೀಚಿನ ಬಜೆಟ್‌ನಲ್ಲಿ ಘೋಷಿಸಲಾದ ಹಡಗು ನಿರ್ಮಾಣ ಕ್ಲಸ್ಟರ್ ಹಾಗೂ ಸಾಗರ ಅಭಿವೃದ್ಧಿ ನಿಧಿ ಕೂಡ ಈ ಅಭಿವೃದ್ದಿಗೆ ಸಹಾಕಾರ ನೀಡಲಿವೆ ಎಂದುಹೇಳಿ ಮಾಹಿತಿ ನೀಡಿದರು.

 

ಶಿರಾಡಿ ಘಾಟ್ ಮಾರ್ಗವಾಗಿ ಮಂಗಳೂರು-ಬೆಂಗಳೂರು ನಡುವಿನ ಸಂಪರ್ಕ ಸುಧಾರಣೆಗೆ ಸಂಬಂಧಿಸಿದ ಹೆದ್ದಾರಿ ಮತ್ತು ರೈಲು ಮಾರ್ಗ ಅಭಿವೃದ್ಧಿಗೆ ಜಂಟಿಯಾಗಿ ಡಿಪಿಆರ್ ತಯಾರಿಸುವ ಕಾರ್ಯಗಳು ಸಹ ಈಗಾಗಲೇ ನಡೆಯುತ್ತಿದೆ. 

 

ಈ ಮೂಲಕ, ಮಂಗಳೂರು ನಗರವು ಭವಿಷ್ಯದಲ್ಲಿ ರಾಷ್ಟ್ರೀಯ ಮಟ್ಟದ ಸಾಗರ ಕೇಂದ್ರವಾಗಿ ಹೊರಹೊಮ್ಮುವ ಸಾಧ್ಯತೆ ಹೊಂದಿದೆ ಎಂದು ಹೇಳಿದರು.