ಮಾಧ್ಯಮ–ರಾಜಕೀಯ ಷಡ್ಯಂತ್ರಗಳ ನಡುವೆ ನಳಿನ್ ಕಟೀಲ್ ಓಪನ್ ಚಾಲೆಂಜ್! ನನ್ನ ಹೆಸರಿನಲ್ಲಿ ಒಂದು ಇಂಚು ಸೈಟ್ ಸಿಕ್ಕಿದಲ್ಲಿ ರಾಜಕೀಯ ಮಾತ್ರವಲ್ಲ ಸಾರ್ವಜನಿಕ ಜೀವನದಿಂದ ಮುಕ್ತನಾಗುತ್ತೇನೆ - ನಳಿನ್ ಕುಮಾರ್ ಕಟೀಲು

  • 12 Apr 2025 06:44:16 PM


ಬೆಂಗಳೂರು: ಜಿ ಕೆಟಗರಿ ನಿವೇಶನ ನೀಡುವ ಕುರಿತು ಹರಡಿದಿದ್ದ ಆರೋಪಗಳ ವಿರುದ್ಧ ಬಿಜೆಪಿ ನಾಯಕ, ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೀವ್ರ ಪ್ರತಿಕ್ರಿಯೆಯನ್ನು ನೀಡಿದ್ದಾರೆ. 

 

ತಮಗೆ ಸರ್ಕಾರದಿಂದ ಯಾವುದೇ ನಿವೇಶನವಿಲ್ಲದಿದ್ದು, ಅವರ ಹೆಸರಿನಲ್ಲಿ ಒಂದಾದರೂ ಸೈಟ್ ಇದ್ದರೆ ತಾವು ಸಾರ್ವಜನಿಕ ಜೀವನ ರಾಜಕೀಯಕ್ಕೇ ನಿವೃತ್ತಿಯಾಗುತ್ತೇನೆ ಎಂದು ಓಪನ್ ಚಾಲೆಂಜ್ ಮಾಡಿದ್ದಾರೆ.

 

"ಕಟೀಲು ಮತ್ತು ಬೆಂಗಳೂರಿನಲ್ಲಿ ಅದು ಒಂದು ಸೈಟ್ ಬಿಟ್ಟು ಬೇರೆ ಯಾವುದಾದರೂ ಒಂದು ಸೈಟ್ ಬೇಡ ಒಂದು ಇಂಚು ಜಾಗ ನನ್ನ ಹೆಸರಿನಲ್ಲಿದ್ದರೆ, ಒಂದು ಇಂಚು ಸೈಟ್ ನನ್ನ ಹೆಸರಿನಲ್ಲಿದ್ದರೆ ಅದನ್ನು ತೋರಿಸಿ. ನನ್ನ ಹೆಸರಿನಲ್ಲಿ ಅಂತಹ ಒಂದು ಸೈಟ್ RTC ಅಲ್ಲಿ ಕಂಡು ಬಂದಲ್ಲಿ ನಾನು ನನ್ನ ಸಾರ್ವಜನಿಕ ಜೀವನವಲ್ಲ, ರಾಜಕೀಯ ಜೀವನ ಮುಕ್ತಗೊಳಿಸುತ್ತೇನೆ ಎಂದು ಓಪನ್ ಚಾಲೆಂಜ್ ಮಾಡಿದ್ದಾರೆ.

 

 

ಇವರ ಮಾತುಗಳು ಇದೀಗ ರಾಜಕೀಯವಲಯದಲ್ಲಿ ಭಾರೀ ಚರ್ಚೆಗೆ ಕಾರಣ ಮಾಡಿದೆ.

 

ರಾಜಕೀಯ ಮಾಡಿ, ಆದರೆ ವಿಚಾರದ ಸತ್ಯ ಸತ್ಯತೆ ಅರಿಯದೇ ತೇಜೋವಧೆ ಮಾಡಲು ಕೀಳುಮಟ್ಟದ ರಾಜಕೀಯ ಮಾಡಬಾರದು ಎಂದೂ ಅದಲ್ಲದೇ ಅವರು ನೇರವಾಗಿ ಪ್ರಸ್ತಾಪಿಸಿದಂತೆ, ಈ ಕುರಿತು ಶಂಕೆಯಿದ್ದರೆ ಸಾರ್ವಜನಿಕರು ಅಥವಾ ಮಾಧ್ಯಮಗಳು RTC ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಅದು ಬಿಟ್ಟು ಷಡ್ಯಂತ್ರದ ರಾಜಕೀಯ ನಡೆಸುವುದು ಸರಿ ಅಲ್ಲ ಎಂಬ ಧ್ವನಿ ಎತ್ತಿದ್ದಾರೆ.