ಮಂಗಳೂರು : ಮಂಗಳೂರು ಸೆಂಟ್ರಲ್ ಹಾಗೂ ಸುಬ್ರಹ್ಮಣ್ಯ ನಿಲ್ದಾಣದ ನಡುವೆ ಬೆಳಗ್ಗೆ ಮತ್ತು ಸಂಜೆ ಪ್ಯಾಸೆಂಜರ್ ರೈಲು ಸಂಚಾರ ಆರಂಭವಾಗಿದೆ. ಹಲವು ವರ್ಷಗಳಿಂದ ಜನತೆ ಮುಂದಿಟ್ಟಿದ್ದ ಬೇಡಿಕೆಯ ಕನಸು ಕೊನೆಗೂ ಈಡೇರಿದೆ.
ಈ ಪ್ಯಾಸೆಂಜರ್ ರೈಲು ಮಂಗಳೂರು ಸೆಂಟ್ರಲ್‌ನಿಂದ ಬೆಳಿಗ್ಗೆ 4 ಗಂಟೆಗೆ ಹೊರಟು, ಬೆಳಿಗ್ಗೆ 6.30ಕ್ಕೆ ಸುಬ್ರಹ್ಮಣ್ಯ ತಲುಪುತ್ತದೆ. ಬೆಳಿಗ್ಗೆ 7 ಗಂಟೆಗೆ ಸುಬ್ರಹ್ಮಣ್ಯದಿಂದ ಹೊರಡುವ ರೈಲು, ಬೆಳಿಗ್ಗೆ 9.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ಇದೇ ರೀತಿಯಲ್ಲಿ ಸಂಜೆಯೂ ಕೂಡ ಪ್ಯಾಸೆಂಜರ್ ರೈಲು ಸೇವೆ ಇದೆ. ಸಂಜೆ 5.45ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ರೈಲು, ರಾತ್ರಿ 8.10ಕ್ಕೆ ಸುಬ್ರಹ್ಮಣ್ಯ ರೋಡ್ ತಲುಪುತ್ತದೆ. ರಾತ್ರಿ 8.40ಕ್ಕೆ ಸುಬ್ರಹ್ಮಣ್ಯ ನಿಲ್ದಾಣದಿಂದ ಹೊರಡುವ ರೈಲು, ರಾತ್ರಿ 11.10ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ಈ ರೈಲು ಸೇವೆಯ ಆರಂಭದಿಂದ ಗ್ರಾಮೀಣ ಪ್ರದೇಶದ ಜನರಿಗೆ ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು, ನೌಕರರು ಮತ್ತು ಭಕ್ತರಿಗೆ ಪ್ರಯಾಣವು ಸುಗಮವಾಗಿದೆ. ಇದು ನಿಜವಾಗಿಯೂ ಸಂತಸದ ವಿಚಾರ.
ಇದುವರೆಗೆ ಮಂಗಳೂರು–ಬೆಂಗಳೂರು ಮಾರ್ಗದಲ್ಲಿ ಎಕ್ಸ್‌ಪ್ರೆಸ್ ರೈಲುಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದರೆ, ಈಗ ಪ್ಯಾಸೆಂಜರ್ ರೈಲು ಸೇವೆಯ ಆರಂಭದಿಂದ ಜನರಿಗೆ ಪ್ರಯಾಣಕ್ಕೆ ಆರಾಮಗಿದೆ.
ಸ್ಥಳೀಯ ಪ್ರವಾಸೋದ್ಯಮ, ವ್ಯವಹಾರ, ಹಾಗೂ ಧಾರ್ಮಿಕ ಪ್ರವಾಸಿಗರಿಗೆ ಇದು ಅನುಕೂಲವಾಗಲಿದೆ.