ವೀರಕಂಬ ಪೆಟ್ರೋಲ್ ಪಂಪ್ ಮುಂಭಾಗದಲ್ಲಿರುವ ಕರ್ನಾಟಕ ರಾಜ್ಯ ಹೆದ್ದಾರಿಯ ಸಮೀಪದ ಪೆಟ್ರೋಲ್ ಪಂಪ್ ಬಳಿ ರಾತ್ರಿ ಕಿಡಿಗೇಡಿಗಳ ಅಟ್ಟಹಾಸ; ಅನೈತಿಕ ಚಟುವಟಿಕೆಗಳ ವಿರುದ್ಧ ಸ್ಥಳೀಯರ ಆಕ್ರೋಶ !

  • 13 Apr 2025 08:36:46 PM


ಮಂಗಲಪದವು:  ಪೆಟ್ರೋಲ್ ಪಂಪ್ ಮುಂಭಾಗದಲ್ಲಿರುವ ಕರ್ನಾಟಕ ರಾಜ್ಯ ಹೆದ್ದಾರಿಯ ಸಮೀಪದಲ್ಲಿ ಕಳೆದ ಕೆಲ ರಾತ್ರಿಗಳಲ್ಲಿ ಕೆಲ ಕಿಡಿಕೇಡಿಗಳು ಅಕ್ರಮವಾಗಿ ರಸ್ತೆಯ ಬದಿಯಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. 

 

ಈ ದುಷ್ಕೃತ್ಯವನ್ನು ತಕ್ಷಣವೇ ನಿಲ್ಲಿಸಬೇಕೆಂದು ಅವರು ಪೆಟ್ರೋಲ್ ಪಂಪ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳ ಬೇಕಾಗಿ ಒತ್ತಾಯಿಸಿದ್ದಾರೆ.

 

ಈ ಮೂರು ದಿನಗಳ ಹಿಂದೆಯಷ್ಟೆ ಇದೇ ಪಂಪಿನಲ್ಲಿ CO2 ಲೀಕ್ ಆಗುವ ಘಟನೆ ನಡೆದಿತ್ತು. ಇದನ್ನು ಕೆಲವರು ತಪ್ಪಾಗಿ CNG ಲೀಕ್ ಎಂದು ಭಾವಿಸಿ ಆತಂಕಗೊಳಗಾಗಿದ್ದರು

 

ಈ ಕುರಿತು ಸ್ಪಷ್ಟತೆ ನೀಡಲು CNG ಕಂಪನಿಯ ತಜ್ಞರು ಸ್ಥಳಕ್ಕೆ ಆಗಮಿಸಿ, ಯಾವುದೇ ಅಪಾಯವಿಲ್ಲದೆಯೇ ಭದ್ರತಾ ಕ್ರಮಗಳನ್ನು ಅನುಸರಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದರು.

 

ಪಂಪ್ ಮಾಲೀಕರು ಈ ಸಮಯದಲ್ಲಿ ಔಟ್‌ ಆಫ್ ಸ್ಟೇಷನ್‌ನಲ್ಲಿರುವುದರಿಂದ, ಈ ವಾರದೊಳಗೆ ಎಲ್ಲ ಸಮಸ್ಯೆಗಳಿಗೂ ಸರಿಯಾದ ಪರಿಹಾರ ನೀಡಲಾಗುವುದು ಎಂಬ ಭರವಸೆ ನೀಡಿದ್ದಾರೆ.

 

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಹಿಂದೂ ಸಂಘಟನೆಗಳ ಪ್ರತಿನಿಧಿಗಳು ಹಾಗೂ ನಾಗರಿಕರು ಉಪಸ್ಥಿತರಿದ್ದರು.