ಹುಬ್ಬಳ್ಳಿ: 5 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನು ಎನ್ಕೌಂಟರ್ ಮಾಡಿದ ಶಶಿಕುಮಾರ್ ಐಪಿಎಸ್ ಅವರ ಧೈರ್ಯಕ್ಕೆ ಇದೀಗ ಜನತೆ ಕೂರಿ ತಲೆಬಾಗುತ್ತಿದೆ.
ಅತ್ಯಾಚಾರಿಯ ವಿರುದ್ಧ ತೆಗೆದುಕೊಂಡ ತಕ್ಷಣ ಕಠಿಣ ಕ್ರಮವು ಬಾಲಕಿಯ ಕುಟುಂಬ ಹಾಗೂ ಸಾರ್ವಜನಿಕರಲ್ಲಿ ನ್ಯಾಯದ ಮೇಲಿನ ಭರವಸೆ ಮೂಡಿಸಿದೆ.
ಈ ಎನ್ಕೌಂಟರ್ ಸುದ್ದಿ ಹರಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜನತೆ ಶಶಿಕುಮಾರ್ ಅವರಿಗೆ ಅಭಿನಂದನೆಗಳ ಸುರಿಮಳೆ ಹರಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ "ಗಂಡೆದೆಯ ಪೊಲೀಸ್ ಅಧಿಕಾರಿ" ಎಂದು ಶಶಿಕುಮಾರ್ ಎಂದೂ ಟ್ವಿಟರ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಹೀಗೆ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಇವರಿಗೆ ಕೋಟಿ ಕೋಟಿ ಅಭಿನಂದನೆಗಳು ಹರಿದುಬರುತ್ತಿದೆ.
ಹಲವರು ಅವರ ಧೈರ್ಯವನ್ನು ನೆನೆಯುತ್ತಾ, 'ಇನ್ನೂ ಇಂಥ ಅಧಿಕಾರಿಗಳು ಬೇಕು' ಅದರ ಅವಶ್ಯಕತೆ ನಮ್ಮ ರಾಜ್ಯಕ್ಕೆ ಅತಿ ಅವಶ್ಯಕ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.