ಮಂಗಳೂರು: ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಎಸ್‌ಸಿ ಮೋರ್ಚಾ ಇದರ ನೇತೃತ್ವದಲ್ಲಿ, ಡಾ. ಬಿ.ಆರ್ ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕುದ್ಮುಲ್ ರಂಗರಾವ್ ಪುರಭವನದ ಬಳಿಯ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಪಣೆ ಮಾಡುವ ಮೂಲಕ ಗೌರವ ನಮನವನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತ್ತು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಅವರು ಅಂಬೇಡ್ಕರ್ ಅವರ ಆದರ್ಶಗಳು ಈ ದಿನಕ್ಕೂ ಪ್ರಸ್ತುತವಾಗಿದ್ದು, ಎಲ್ಲರನ್ನೊಳಗೊಂಡ ಸಮತೆಯ ಸಮಾಜ ನಿರ್ಮಾಣಕ್ಕೆ ಅವರು ಬರೆದ ಸಂವಿಧಾನ ದಿಕ್ಕು ತೋರಿಸುತ್ತಿದೆ ಎಂದು ವಿವರಿಸಿದರು.
"ಬಾಬಾಸಾಹೇಬರ ಕನಸುಗಳನ್ನ ನನಸುಮಾಡುವ ರಾಷ್ಟ್ರ ನಿರ್ಮಾಣದಲ್ಲಿ ನಾವು ಪ್ರತಿ ದಿನ ಸಹಭಾಗಿತ್ವವಹಿಸಬೇಕು" ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಮಾಧ್ಯಮ ಸಂಚಾಲಕ ವಸಂತ್ ಜೆ ಪೂಜಾರಿ, ಲಲ್ಲೇಶ್, ಪ್ರೇಮಾನಂದ ಶೆಟ್ಟಿ, ಭಾಸ್ಕರಚಂದ್ರ ಶೆಟ್ಟಿ, ಶಿವಪ್ರಸಾದ್, ಗೀತಾ ಸುಂಕದಕಟ್ಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಭರತ್ ಕುಮಾರ್ ಅವರು ಸ್ವಾಗತಿಸಿ, ರಘುವೀರ್ ಬಾಬುಗುಡ್ಡೆ ನಿರ್ವಹಿಸಿದರು.
ವಿವಿಧ ಮೋರ್ಚಾಗಳ ಪ್ರಮುಖರು, ಕಾರ್ಯಕರ್ತರು, ಮತ್ತು ನಿಕಟಪೂರ್ವ ಮಹಾನಗರ ಪಾಲಿಕೆ ಸದಸ್ಯರು ಸೇರಿ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಿದರು.