ಸಂವಿಧಾನ ಶಿಲ್ಪಿಗೆ ಭಾವಪೂರ್ಣ ನಮನ: ಕಜಂಪಾಡಿಯಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ!

  • 15 Apr 2025 01:26:44 PM

ಕಜಂಪಾಡಿ: ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಅವರ ಜನ್ಮದಿನದ ಪ್ರಯುಕ್ತ ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿನ 203ನೇ ಬೂತ್ ಕಜಂಪಾಡಿಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

 

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಗ್ರಾಮಸ್ಥರು ಹಾಗೂ ಬಾಲಕರು ಉಪಸ್ಥಿತರಿದ್ದರು. ಸಂವಿಧಾನ ಶಿಲ್ಪಿಗೆ ನಮನಗಳನ್ನು ಸಲ್ಲಿಸಿದರು.

 

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರ ಸಮಾಜ ಸೇವೆ, ಶಿಕ್ಷಣ ಮತ್ತು ಸಮಾನತೆಯ ಪರ ಹೋರಾಟವನ್ನು ಸ್ಮರಿಸಿದರು.