ದೂರು ನೀಡಿದ ದ್ವೇಷದ ಕ್ರೂರ ಪ್ರತೀಕಾರ: ಬೆಂಕಿ ಹಚ್ಚಿದ ದುಷ್ಕರ್ಮಿ; ಗಂಭೀರ ಗಾಯ ಯುವತಿ ಸಾವು!

  • 15 Apr 2025 04:21:49 PM

ಕಾಸರಗೋಡು: ಬೇಡಡ್ಕ ಮನ್ನಡ್ಕದ ಯುವತಿ ರಮಿತಾ (22), ತನ್ನ ಅಂಗಡಿಯಲ್ಲಿ ಕೆಲಸ ಮಾಡುವ ವೇಳೆಯಲ್ಲಿ ದುಷ್ಕರ್ಮಿಯೊಬ್ಬ ಟಿನ್ನರ್ ಸುರಿದು ಬೆಂಕಿ ಹಚ್ಚಿ ಕ್ರೂರ ಕೃತ್ಯಕ್ಕೆ ಎಸಗಿದ್ದಾನೆ.  

 

ಬೆಂಕಿಯಲ್ಲಿ ಸುಟ್ಟು ಹೋದ ಯುವತಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಗಂಭೀರ ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರ ರಾತ್ರಿ ಅಂತಿಮ ಉಸಿರೆಳೆದಿದ್ದಾರೆ.

 

ಈ ದುರ್ಘಟನೆ ಏಪ್ರಿಲ್ 8ರಂದು ಸಂಭವಿಸಿದ್ದು e ಹೀನ ಕೃತ್ಯವನ್ನು ತಮಿಳುನಾಡು ಮೂಲದ ಪೀಠೋಪಕರಣ ಅಂಗಡಿಯ ಮಾಲಿಕ ರಾಮಕೃತ (57) ಎಂಬಾತ ಮಾಡಿದ್ದಾನೆ ಎಂದು ತಿಳಿದು ಬಂದಿದೆ. 

 

ದಿನಂಪ್ರತಿ ಪಾನಮತ್ತನಾಗಿ ಕಿರುಕುಳ ನೀಡುತ್ತಿದ್ದ ಇವನ ವಿರುದ್ಧ ರಮಿತಾ ಪೊಲೀಸರಿಗೆ ದೂರು ನೀಡಿದ್ದು ಇದರ ಕೋಪದಿಂದ ಅಂಗಡಿಗೆ ನುಗ್ಗಿದ ರಾಮಕೃತ, ಟಿನ್ನರ್ ಸುರಿದು ಬೆಂಕಿ ಹಚ್ಚಿ ಈ ದುಷ್ಕೃತ್ಯ ಮಾಡಿದ್ದಾನೆ ಎಂದು ತಿಳಿದುಬಂದಿದೆ.

 

ಅನಂತರ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಈ ಭೀಕರ ಘಟನೆಯು ಜನಮನದಲ್ಲಿ ಆಘಾತ ಮೂಡಿಸಿದ್ದು, ಸ್ಥಳೀಯರು ಕಠಿಣ ಕ್ರಮಕ್ಕೆ ಆಗ್ರಹ ವ್ಯಕ್ತಪಡಿಸಿದ್ದಾರೆ.