ಮಲ್ಪೆ: ಮಸೀದಿಗೆ ಸಂಬಂಧಿಸಿದ ಕಟ್ಟಡದ ಶೌಚಾಲಯ ಒಂದರಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಘಟನೆಯೊಂದು ಸಂಭವಿಸಿದೆ.
ನಿನ್ನೆ, ಮಸೀದಿಯ ವ್ಯವಸ್ಥಾಪಕರಾದ ಸುಹೇಲ್ ಎಂಬವರು ಶೌಚಾಲಯಕ್ಕೆ ತೆರಳಿದ ಸಮಯದಲ್ಲಿ ಅವರು ಶಿಶುವಿನ ಮೃತದೇಹವನ್ನು ಕಂಡು ತಕ್ಷಣವೇ ಈ ಬಗ್ಗೆ ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಶಿಶು ಜನನದ ಮುನ್ನ ಅಥವಾ ಜನನದ ವೇಳೆ ಸಾವನ್ನಪ್ಪಿರಬಹುದು ಎಂದು ಅಂದಾಜಿಸಿದ್ದಾರೆ.
ಯಾರೋ ಅಪರಿಚಿತರು ಶಿಶುವಿನ ಜನನದ ವಿಚಾರವನ್ನು ಮರೆಮಾಚಲು, ಮೃತದೇಹವನ್ನು ರಹಸ್ಯವಾಗಿ ಶೌಚಾಲಯದಲ್ಲಿ ವಿಲೇ ಮಾಡಿರ ಬಹುದು ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.