ಹಾವೇರಿ: ಸನಾತನ ಧರ್ಮದಲ್ಲಿ ಗೋಮಾತೆಗೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ತನ್ನ ರೋಮ ರೋಮಗಳಲ್ಲಿ ದೇವತೆಗಳ ಸನ್ನಿಧಿಯನ್ನೂ ಕೊಂಬುಗಳಲ್ಲಿ ಸೂರ್ಯ-ಚಂದ್ರರನ್ನು, ಕಾಲುಗಳಲ್ಲಿ ವೇದಗಳನ್ನು, ಮುಖದಲ್ಲಿ ಬ್ರಹ್ಮನನ್ನು ಹಾಗೂ ಕಣ್ಣುಗಳಲ್ಲಿ ಶಿವ-ವಿಷ್ಣುವನ್ನು ಹೊತ್ತುಕೊಂಡಿರುವ ಗೋವು, ಹಿಂದು ಧರ್ಮದ ಆರಾಧ್ಯ ದೇವತೆಯಾಗಿದೆ.
ಇದಲ್ಲದೆ, ಗೋ ಹಾಲು ಮತ್ತು ತುಪ್ಪ ಆರೋಗ್ಯಕ್ಕೆ ಹಿತವಾದುದು ಅದಲ್ಲದೆ, ಗೋಮೂತ್ರ ಹಾಗೂ ಸಗಣಿ ಕೃಷಿಗೆ ಉಪಯುಕ್ತವಾಗಿರುತ್ತದೆ.
ಆದರೆ ಇಂತಹ ಪವಿತ್ರ ಗೋಮಾತೆಯನ್ನು ಕೇವಲ ಮಾಂಸಕ್ಕಾಗಿ ಹತ್ಯೆ ಮಾಡುತ್ತಿರುವುದು ಖಂಡನೀಯ. ಮಹಾಪರಾಧ.
ಹಿಂದುಗಳ ಶ್ರದ್ಧಾಭಾವನೆಗೆ ಅವಮಾನ ಮಾಡುವುದು, ಸಮಾಜದಲ್ಲಿ ಶಾಂತಿ ಕದಡುವುದು ಮತ್ತು ಭಾರತದ ಭೂಮಿಯನ್ನು ಬಂಜರಗೊಳಿಸುವ ಉದ್ದೇಶದಿಂದಲೂ ಈ ಅಕ್ರಮ ಕೃತ್ಯಗಳು ನಡೆಯುತ್ತಿವೆ ಎಂಬ ಆತಂಕ ಮೂಡುತ್ತಿದೆ.
ಇತ್ತೀಚೆಗೆ ಹಾನಗಲ್ಲ ತಾಲೂಕಿನ ಹಲವೆಡೆ ಅಕ್ರಮ ಗೋಹತ್ಯೆ ಪ್ರಕರಣಗಳು ಹೆಚ್ಚಾಗಿ ವರದಿಯಾಗಿದ್ದು, ಇದು ಪುನರಾವರ್ತನೆಯಾಗುತ್ತಿರುವುದು ಆತಂಕಕಾರಿ ವಿಷಯವಾಗಿರುತ್ತದೆ.
ಆದ್ದರಿಂದ ಈ ಹಿನ್ನೆಲೆಯಲ್ಲೇ ಜಾಗರಣ ವೇದಿಕೆ ಹಾವೇರಿ ಜಿಲ್ಲೆ ಇದರ ವತಿಯಿಂದ 17-04-2025ರ ಗುರುವಾರ ಅಕ್ಕಿಆಲೂರಿನಲ್ಲಿ ಬೃಹತ್ ಜನಾಂದೋಲನದ ಮೂಲಕ ಆಕ್ರೋಶ ವ್ಯಕ್ತಪಡಿಸಲು ಕರೆ ನೀಡಿದೆ.
ಬೆಳಿಗ್ಗೆ 11 ಗಂಟೆಗೆ ಶ್ರೀ ಚನ್ನವಿರೇಶ್ವರ ವಿರಕ್ತಮಠದಿಂದ ಪ್ರಾರಂಭವಾಗಿ, ನಂತರ ಶ್ರೀ ಸಿಂಧೂರ ಸಿದ್ದಪ್ಪ ವೃತ್ತದಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಪ್ರತಿಭಟನೆ ಮುಕ್ತಾಯಗೊಳ್ಳಲಿದೆ.
ಎಲ್ಲಾ ಹೋರಿಮಾಲಕರು, ರೈತ ಬಂಧುಗಳು ತಮ್ಮ ಹೋರಿಗಳನ್ನು ಈ ಪವಿತ್ರ ಹೋರಾಟಕ್ಕೆ ಕರೆತಂದು ಪಾಲ್ಗೊಳ್ಳಬೇಕು. ಇದು ಕೇವಲ ಒಂದು ಪ್ರತಿಭಟನೆ ಅಲ್ಲ – ನಮ್ಮ ಸಂಸ್ಕೃತಿಯ, ಶ್ರದ್ಧೆಯ, ಹಾಗೂ ನೈತಿಕ ಮೌಲ್ಯಗಳ ಉಳಿವಿಗಾಗಿ ನಡೆಸುವ ಹೋರಾಟ.
ಸಮಾಜದಲ್ಲಿ ಗೋವು ತನ್ನ ಪವಿತ್ರ ಸ್ಥಾನವನ್ನು ಮರೆತು ಹೋಗದಂತೆ ಮಾಡುವುದು ನಮ್ಮ ಹೊಣೆ. ಬನ್ನಿ, ನಾವು ಏಕತೆಯಿಂದ ಧ್ವನಿ ಎತ್ತೋಣ ಎಂದು ಹಿಂದೂ ಜಾಗರಣ ವೇದಿಕೆ ಹಾವೇರಿ ಜಿಲ್ಲೆ ಮನವಿ ಮಾಡಿಕೊಂಡಿದ್ದಾರೆ.