ಮಲ್ಪೆ:ಉಡುಪಿ ಜಿಲ್ಲೆಯ ಮಲ್ಪೆ ಠಾಣಾ ವ್ಯಾಪ್ತಿಯ ಜಾಮಿಯಾ ಮಸೀದಿ ಆವರಣದ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿರುವ ಘಟನೆ ಇದೀಗ ಸುದ್ದಿ ಮೂಡಿಸಿದೆ.
ಈ ಶೌಚಾಲಯವು ಕಾರ್ಮಿಕರಿಗಾಗಿ ನಿರ್ಮಿಸಲಾಗಿದ್ದು, ಶವ ಪತ್ತೆಯಾದ ನಂತರ ಮಸೀದಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ನಡೆಸಿದ ತನಿಖೆಯಲ್ಲಿ ಸ್ಥಳೀಯ ಯುವತಿಯಾದ ಆಫ್ರಿನಾ ಅದು ತಮ್ಮದೇ ಮಗು ಎಂದು ಒಪ್ಪಿಕೊಂಡಿದ್ದಾರೆ.
ಸುಮಾರು 7.5 ತಿಂಗಳ ಭ್ರೂಣವಾಗಿದ್ದು, ಯಾವುದೇ ವೈದ್ಯಕೀಯ ಪ್ರಕ್ರಿಯೆ ಇಲ್ಲದೆ ಅಬಾರ್ಷನ್ ಮಾಡಿದ್ದು ಎಂದೆನ್ನಲಾಗಿದೆ.
ಹೊಟ್ಟೆನೋವಿನಿಂದ ಶೌಚಾಲಯಕ್ಕೆ ತೆರಳಿದ ಆಫ್ರಿನಾ, ಮಗುವನ್ನು ಅಲ್ಲಿಯೇ ಬಿಟ್ಟುಬಂದಿದ್ದಾಳೆ ಎಂಬ ಮಾಹಿತಿ ಲಭಿಸಿದೆ.
ಪ್ರಸ್ತುತ ಆಫ್ರಿನಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನಂತರ ಅಗತ್ಯವಿರುವ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಎಸ್‌ಪಿ ಡಾ. ಅರುಣ್ ಕುಮಾರ್ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಕೆಲ ಅನುಮಾನಾಸ್ಪದ ಆಡಿಯೋಗಳು ವೈರಲ್ ಆಗುತ್ತಿದೆ ಇದರ ಹಿನ್ನೆಲೆಯಲ್ಲಿ, ಸುಳ್ಳು ಸುದ್ದಿಯನ್ನು ಹರಡುತ್ತಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.