ಮಂಗಳೂರು: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ, ಪುತ್ತೂರು ಜಿಲ್ಲೆ ಪರವಾಗಿ ಎಲ್ಲ ಸಹೋದರ ಹಿಂದೂ ಭಾಂದವರಿಗೆ ವಿನಮ್ರ ಮನವಿ.
ಇತ್ತೀಚೆಗೆ ದೇಶದ ಮೇಲೆ ಮಾರಕವಾಗಿ ಪರಿಣಾಮ ಬೀರುವಂತಹ ಕಾನೂನು ತಿದ್ದುಪಡಿ ಪ್ರಸ್ತಾಪಗೊಂಡ ಹಿನ್ನೆಲೆಯಲ್ಲಿ ದೇಶದ್ರೋಹಿ ಶಕ್ತಿಗಳು ಒಟ್ಟಾಗಿ ಸೇರಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಯೋಜನೆ ಹಾಕಿರುವುದರ ಶಂಕೆ ಇದ್ದು ಇದರಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು, ಪೋಲಿಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ತಕ್ಷಣದಿಂದ ನಿರ್ಣಯವನ್ನು ತೆಗೆದುಕೊಂಡಿದೆ.
ದಿನಾಂಕ 18-04-2025 ಶುಕ್ರವಾರ ಮಧ್ಯಾಹ್ನ 12:00 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ, ಮಂಗಳೂರಿಗೆ ಹೋಗುವ ಮತ್ತು ಬರುವ ಎಲ್ಲಾ ಮಾರ್ಗಗಳನ್ನು ಬಂದ್ ಮಾಡುವಂತೆ ಪೋಲಿಸರು ಆದೇಶಿಸಿದ್ದಾರೆ.
ಈ ಕ್ರಮ, ಬಾಂಗ್ಲಾದೇಶ ಮಾದರಿಯಲ್ಲಿ ಗಲಭೆ ಉಂಟುಮಾಡುವ ಶಂಕಿತ ಯೋಜನೆಗಳನ್ನು ತಡೆಯಲು ಕೈಗೊಂಡ ಮುನ್ನೆಚ್ಚರಿಕೆ ಕ್ರಮವಾಗಿದ್ದು ಹಿಂದೂ ಸಮಾಜವು ಇದನ್ನು ಸಮರ್ಥವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಎಂದು ವಿನಮ್ರಾಗಿ ಮನವಿ ಮಾಡಿದ್ದಾರೆ.