ಕೇಶದಾನದ ಮೂಲಕ ಕ್ಯಾನ್ಸರ್ ಪೀಡಿತರಿಗೆ ಆಶಾಕಿರಣವಾದ ವಜ್ರೆಶ್ ವಿಟ್ಲ; ಯುವಕರಿಗೆ ಪ್ರೇರಣಾದಾಯಕ ನಡೆ!

  • 17 Apr 2025 04:01:15 PM

ವಿಟ್ಲ: ಕ್ಯಾನ್ಸರ್ ಪೀಡಿತರಿಗಾಗಿ ತಮ್ಮ ಬೆಳೆಸಿದ ಕೂದಲನ್ನು ದಾನವಾಗಿ ನೀಡಿರುವ ವಜ್ರೇಶ್ ವಿಟ್ಲ ಅವರ ಮಾನವೀಯ ನಡೆ ಸಮಾಜದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. 

 

ಇವರ ಈ ತ್ಯಾಗದ ಮಾದರಿ ನಡೆ ಹಲವರಿಗೆ ಪ್ರೇರಣೆಯಾಗಿದೆ. ಶರೀರದ ಭಾಗವೊಂದನ್ನು ಇತರರಿಗಾಗಿ ನೀಡುವುದು ಕೇವಲ ದಾನವಲ್ಲ, ಅದು ಹೃದಯದ ವಿಷಾಲತೆ ಮತ್ತು ಪರೋಪಕಾರದ ಪ್ರತಿರೂಪವಾಗಿದೆ.

 

ವಜ್ರೇಶ್ ಅವರ ಕೇಶದಾನದ ಬಳಿಕ, ತೆಗೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.  

 

ಇವರ . ಕೃತ್ಯ ಮತ್ತಷ್ಟು ಯುವಕರಿಗೆ ಪ್ರೇರಣೆಯಾಗಲಿ ಎಂಬದು ಎಲ್ಲರ ಹಾರೈಕೆ. ನಿಜವಾದ ತ್ಯಾಗವು ಮಾತ್ರವಲ್ಲದೆ, ಇತರರಿಗೆ ಸಹಾಯ ಮಾಡುವ ಮನೋಭಾವನೆ ಬೆಳೆಸಿಕೊಳ್ಳುವುದರ ಮೂಲಕ ಬೆಳೆದಾಗ ಮಾತ್ರ ನಿಜವಾದ ಬದಲಾವಣೆಗೆ ಸಾಧ್ಯವಾಗುತ್ತದೆ.