ಸುಳ್ಯ: ಸುಳ್ಯ ತಾಲ್ಲೂಕಿನ ಕುಲ್ಕುಂದ ಎಂಬ ಸ್ಥಳದಲ್ಲಿ ಈ ದಿನಗಳ ಹಿಂದೆ ಕಾಡು ಹಂದಿ ಮಾಂಸ ನೀಡುವುದಾಗಿ ಜನರಿಂದ ಹಣ ಪಡೆದು ವಂಚನೆ ಮಾದೂತಿದ್ದ ವ್ಯಕ್ತಿಯನ್ನು ಜನರು ಸ್ವತಃ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಮಧ್ಯಾಹ್ನದ ವೇಳೆಗೆ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ ಈತನ “ಕಾಡು ಹಂದಿ ಉರುಳಿಗೆ ಬಿದ್ದಿದೆ, ಮಾಂಸ ಬೇಕಾದರೆ ಹೇಳಿ ಎಂದು ಹೇಳಿದ್ದ ಎಂದೂ ಆ ಮಹಿಳೆಗೆ ಅದರಲ್ಲಿ ಸಂಶಯ ಬಂದುದರಿಂದ ತಕ್ಷಣಆಯಾ ಮಹಿಳೆ ಸ್ಥಳೀಯರಿಗೆ ಮಾಹಿತಿ ನೀಡಿದ್ದಾಳೆ ಎಂದು ತಿಳಿದು ಬಂದಿದೆ.
ಅದಾದ ಬಳಿಕ ಸ್ಥಳಕ್ಕೆ ಆಗಮಿಸಿದ ಹಲವರಲ್ಲಿ ಒಬ್ಬರು ಆತನನ್ನು ಗುರುತು ಹಿಡಿದರು. ಈ ಹಿಂದೆ ಅವರು ಅವನಿಗೆ ಹಣ ನೀಡಿ ವಂಚನೆಗೆ ಒಳಗಾಗಿಗಿದ್ದರೀಂದು ತಿಳಿಸಿದ್ದಾರೆ. ಅವರು ಈತನನ್ನು ತಕ್ಷಣವೇ ಪ್ರಶ್ನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ವಿಚಾರಣೆ ನಡೆಸಿದಲ್ಲೂ ಈತ ಕಡಬ ತಾಲೂಕಿನ ಮರ್ದಾಳ ನಿವಾಸಿ ಎನ್ನುವುದು ತಿಳಿದುಬಂದಿದೆ. ಇತನು ಹಲವರಿಗೆ ವಿವಿಧ ವಾಗ್ದಾನಗಳ ಮೂಲಕ ಹಣ ಪಡೆದು ಮೋಸ ಮಾಡಿರುವ ಸತ್ಯ ಹೊರಬಿದ್ದಿದೆ.
ವಂಚಿತ ವ್ಯಕ್ತಿಗಳಿಂದ ಅಧಿಕೃತ ದೂರುಗಳು ಪ್ರಾಪ್ತವಾಗದ ಕಾರಣ, ಪೊಲೀಸರು ಈತನನ್ನು ವಿಚಾರಿಸಿ ಬಿಟ್ಟಿದ್ದಾರೆ. ಕುಲ್ಕುಂದ ಭಾಗದಲ್ಲಿಯೂ ಈತ "ಕಟ್ಟಿಗೆ ಮಾರುತ್ತೇನೆ" ಎಂದು ನಂಬಿಸಿ ಮುಂಗಡ ಹಣ ಪಡೆದುಕೊಂದು ಮೋಸ ಹೋಗಿದ್ದಾರೆ ಎಂದು ಜನರು ತಿಳಿಸಿದ್ದಾರೆ.
ಇದೀಗ ಈತನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಜನತೆಗೆ ಎಚ್ಚರಿಕೆ ನೀಡುತ್ತಿರುವ ಸಂದೇಶಗಳು ವೈರಲ್ ಆಗಿವೆ.