ಮಂಗಳೂರು: ವಕ್ಸ್ ತಿದ್ದುಪಡಿ ಕಾಯ್ದೆಯ ವಿರುದ್ಧ ಮಂಗಳೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಯುತ್ತಿದ್ದಾಗಲೇ ಅಡ್ಯಾರು ಪ್ರದೇಶದಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದೆ.
ನೇಮೋತ್ಸವಕ್ಕೆ ಹಾಕಲಾಗಿದ್ದ ಪತಾಕೆ ಹಾಗೂ ಪ್ಲೆಕ್ಸ್‌ಗಳನ್ನು ಪೊಲೀಸರು ತೆರವುಗೊಳಿಸಿ ಪ್ರತಿಭಟನೆಯ ಫ್ಲೆಕ್ಸ ಹಾಕಿರುವುದಕ್ಕೆ ಈ ಕ್ರಮ ಸರಿ ಅಲ್ಲ ಎಂದು ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ನೇಮೋತ್ಸವದ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ಧತೆ ನಡೆಯುತ್ತಿತ್ತು. ಆದರೆ, ವಕ್ಸ್ ವಿರೋಧಿ ಪ್ರತಿಭಟನೆಗಾಗಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಧಾರ್ಮಿಕ ಬೋರ್ಡ್‌ಗಳನ್ನು ತೆರವುಗೊಳಿಸಿರುವುದು ಪ್ರಶ್ನೆಯಾಗಿ ಮಾರ್ಪಟ್ಟಿದೆ. “ಇದು ತುರ್ತು ಪರಿಸ್ಥಿತಿಯೇ? ಹಿಂದೂ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸೋಕೆ ಸರ್ಕಾರಕ್ಕೆ ಹಕ್ಕಿದೆಯೆ?” ಎಂಬುದಾಗಿ ಡಾ. ಭರತ್ ಶೆಟ್ಟಿ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಸಂಚಾರಕ್ಕೆ ನಿರ್ಬಂಧ ವಿಧಿಸಿರುವುದನ್ನೂ ಇವರು ಟೀಕಿಸಿದ್ದಾರೆ.
“ಹೆದ್ದಾರಿ ಬಂದ್ ಮಾಡಿ ಏಕಮುಖ ಸಂಚಾರ ರೂಪಿಸಿದಂತೇ ಸಾರ್ವಜನಿಕರಿಗೆ ತೊಂದರೆ. ಈ ಕ್ರಮ ಪ್ರತಿಭಟನೆಯ ಸುರಕ್ಷತೆಗೆ ಅಲ್ಲ, ಹಿಂದೂ ಧರ್ಮ ಆಚರಣೆಗಳಿಗೆ ಅಡ್ಡಿಯೇನೋ?” ಎಂಬ ಚರ್ಚೆಗೆ ಕಾರಣವಾಗಿದೆ.