ಮಾಜಿ ಡಾನ್ ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ಶೂಟೌಟ್: ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು!

  • 19 Apr 2025 01:35:48 PM

ರಾಮ ನಗರ: ಮಾಜಿ ಡಾನ್ ಮುತ್ತಪ್ಪ ರೈ ಅವರ ಕಿರಿಯ ಮಗ ರಿಕ್ಕಿ ರೈ ಮೇಲೆ ಶೂಟೌಟ್ ನಡೆದ ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ರಾಮನಗರ ತಾಲೂಕಿನ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

 

 ಘಟನೆ ನಡೆದ ಸಂದರ್ಭದಲ್ಲಿ ರಿಕ್ಕಿ ರೈ ಜೊತೆಗೆ ಇದ್ದ ಬಸವರಾಜ್ ಕಾರು ಚಾಲನೆ ಮಾಡುತ್ತಿದ್ದರು. ಮನೆಯ ಕಾಂಪೌಂಡ್ ಬಳಿ ಮಧ್ಯರಾತ್ರಿ ಸುಮಾರು 1.30 ಗೆಶೂಟೌಟ್ ನಡೆದಿದೆ. ಇದರಲ್ಲಿ ಗಾಯಗೊಂಡ ರಿಕ್ಕಿ ರೈ ಅವರನ್ನು ತಕ್ಷಣ ಬುಡದಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

 

ಈ ಘಟನೆಯ ಕುರಿತು ಬಸವರಾಜ್ ನೀಡಿದ ದೂರಿನ ಮೇರೆಗೆ, ರಾಕೇಶ್ ಮಲ್ಲಿ, ಅನುರಾಧಾ, ನಿತೇಶ್ ಶೆಟ್ಟಿ ಮತ್ತು ವೈದ್ಯನಾಥನ್ ಎಂಬ ಆರೋಪಿಗಳ ವಿರುದ್ಧ ಬಿಎನ್‌ಎಸ್ 109, 3(5) ಮತ್ತು ಆರ್ಮ್ಸ್ ಆ್ಯಕ್ಟ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. 

 

ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಆರೋಪಿತರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.

 

ಘಟನೆಯ ಹಿಂದೆ ರಿಯಲ್ ಎಸ್ಟೇಟ್ ಸಂಬಂಧಿತ ವಿವಾದವೇ ಕಾರಣವಾಗಿರ ಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.

 

 ಹಿಂದೆಯೂ ಈ ವಿಚಾರದಲ್ಲಿ ವಿವಾದ ಉಂಟಾದದ್ದರಿಂದ ಶೂಟೌಟ್ ಕೃತ್ಯಕ್ಕೂ ಇದೆ ಕಾರಣವೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.