ಮುಲ್ಕಿ : ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದ ವಾರ್ಷಿಕ ಜಾತ್ರೆಯಲ್ಲಿ ಅಹಿತಕರ ಘಟನೆ – ಬ್ರಹ್ಮರಥ ಮುರಿತದಿಂದ ಭಕ್ತರಲ್ಲಿ ಕಳವಳ!

  • 19 Apr 2025 04:14:25 PM

ಮುಲ್ಕಿ : ಕರಾವಳಿಯ ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ವಾರ್ಷಿಕ ಉತ್ಸವದಲ್ಲಿ ಶುಕ್ರವಾರ ತಡರಾತ್ರಿ ಅಹಿತಕರ ಘಟನೆಯೊಂದು ಸಂಭವಿಸಿತು.

 

  ರಥೋತ್ಸವದ ವೇಳೆ ದೇವಿಯ ರಥ ಕ್ಷೇತ್ರದ ಸುತ್ತ ಸಾಗಿ ಬರುತ್ತಿದ್ದಾಗ ವೇಳೆಯಲ್ಲಿ ಬ್ರಹ್ಮರಥದ ಮೇಲ್ಬಾಗ ಮುರಿದು ಬಿದ್ದ ಘಟನೆ ಸಂಭವಿಸಿದೆ. ತಡ ರಾತ್ರಿ 2 ಗಂಟೆ ಸುಮಾರಿಗೆ ಘಟನೆ ಸಂಭವಿಸಿದರೂ, ಭಕ್ತರು ಹಾಗೂ ಅರ್ಚಕರಿಗೆ ಯಾವುದೇ ಹಾನಿಯಾಗದಿರುವುದು ದೇವಿಯ ಕೃಪೆಯಿಂದ ಎಂದು ಭಕ್ತರು ಭಾವಿಸಿದ್ದಾರೆ. 

 

ಕೂಡಲೇ ದೇವಿಯನ್ನು ಚಂದ್ರಮಂಡಲ ರಥದಲ್ಲಿ ಕೂರಿಸಿ ಉತ್ಸವವನ್ನು ಮುಂದುವರಿಸಲಾಯಿತು.

 

ಈ ಘಟನೆ ಭಕ್ತರಲ್ಲಿ ಕಳವಳ ಉಂಟುಮಾಡಿದ್ದರೂ, ಭಕ್ತಿಯುತ್ಸವದಲ್ಲಿ ಯಾವುದೇ ತೊಂದರೆಯಾಗಲಿಲ್ಲ. ಬಪ್ಪನಾಡು ಕ್ಷೇತ್ರದ ಪ್ರಸಿದ್ಧ ಶಯನೋತ್ಸವದ ವೇಳೆ ದೇವಿಗೆ 1.5 ಲಕ್ಷಕ್ಕೂ ಹೆಚ್ಚು ಅಟ್ಟೆ ಮಲ್ಲಿಗೆ ಹೂಗಳು ಅರ್ಪಿಸಲ್ಪಟ್ಟವು. 

 

 ಈ ಘಟನೆಯಲ್ಲಿಯೂ ಭಕ್ತರ ನಂಬಿಕೆ, ಶ್ರದ್ಧೆ ಹಾಗೂ ದೇವಿಯ ಪ್ರಭಾವ ಮತ್ತೊಮ್ಮೆ ಸ್ಪಷ್ಟವಾಗಿ ಹೊರಹೊಮ್ಮಿತು.