ಚಿಕ್ಕಮಗಳೂರು: ಚಿಕ್ಕ ಮಂಗಳೂರು ಜಿಲ್ಲೆ ಕಡೂರು ತಾಲೂಕಿನ ಮಲ್ಲೇಶ್ವರ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವ ಹೆಬ್ಬಾಗಿಲ ಬಳಿ ಚರಂಡಿ ಹಾಗೂ ರಾಜಕಾಲುವೆ ತುಂಬಿ ಹರಿಯುತ್ತಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕವನ್ನುಂಟುಮಾಡಿದೆ.
ಪಿಡಿಓ ಮತ್ತು ಪಂಚಾಯತಿ ಸದಸ್ಯರ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ, ಕೊಳಚೆ ನೀರು ಮನೆಗಳವರೆಗೆ ಹರಿದು ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶಿತರಾಗಿದ್ದಾರೆ.
ಹರಿದು ಬರುವ ನೀರಿನಿಂದ ದುರ್ವಾಸನೆ, ನೀರಿನಲ್ಲಿ ಕಟ್ಟಿನಿಂತಿರುವ ತ್ಯಾಜ್ಯಗಳು ಹಾಗೂ ಕೀಟಗಳು ಹರಡುತ್ತಿದ್ದು, ಡೆಂಗ್ಯೂ, ಮಲೇರಿಯಾ, ಟೈಫಾಯ್ಡ್ ಮುಂತಾದ ರೋಗಗಳ ಭೀತಿ ಜನರನ್ನು ಕಾಡುತ್ತಿದೆ.
ಗ್ರಾಮಸ್ಥರು ಈ ಬಗ್ಗೆ ಗ್ರಾಮ ಪಂಚಾಯತಿ, ಇಒ ಹಾಗೂ ಸಿಇಒ ಅವರ ಗಮನಕ್ಕೆ ತಂದರೂ ಯಾವುದೇ ರೀತಿಯ ಸ್ಪಂದನೆ ಇಲ್ಲದಿರುವುದು ಸಾರ್ವಜನಿಕ ಆರೋಗ್ಯದ ಕುರಿತು ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ದುರಸ್ಥಿತಿಗೆ ಕೂಡಲೇ ಸ್ಪಂದಿಸದೆ ಹೋದರೆ ಪರಿಸ್ಥಿತಿ ಇನ್ನಷ್ಟು ಹೀನವಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.