ಗೋಮಾಳ ಜಾಗದಲ್ಲಿ ಮತ್ತೆ ರಾತ್ರೋರಾತ್ರಿ ಅಕ್ರಮ ಕಟ್ಟಡ ನಿರ್ಮಾಣ ;ರಾಜಕೀಯ ಪ್ರಭಾವದ ಹಿಂದೆ ಅಧಿಕಾರಿಗಳ ಮೌನ – ತೆರವು ಆದೇಶ ಇದ್ದರೂ ಕ್ರಮ ಶೂನ್ಯ! ಹಿಂದೂ ಸಂಘಟನೆಯ ಮುಖಂಡರು ಗರಂ – ತೆರವು ಕಾರ್ಯವಾಗದಿದ್ದರೆ ತೀವ್ರ ಹೋರಾಟಕ್ಕೆ ಎಚ್ಚರಿಕೆ!

  • 20 Apr 2025 04:13:32 PM

 ಪೆರಾಜೆ/ ಕೆದಿಲ: ಬಂಟ್ವಾಳ ತಾಲೂಕಿನ ಗಡಿಯಾರ ಸಮೀಪದ ಸ್ವಾಗತನಗರ ಎಂಬಲ್ಲಿ ಪೆರಾಜೆ ಗ್ರಾಮಕ್ಕೆ ಸಂಬಂಧಿಸಿದ 20 ಎಕರೆ ಹಾಗು ಕೆದಿಲ ಗ್ರಾಮಕ್ಕೆ ಸಂಬಂಧಿಸಿದ 14.46 ಎಕರೆ ಗೋಮಾಳ ಜಾಗದಲ್ಲಿ ಇರುತ್ತದೆ. ಅಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಕಾರ್ಯಗಳು ನಡೆಯುತ್ತಲೆ ಇದೆ.

 

ಈ ಜಾಗದಲ್ಲಿ ಹಿಂದೆ ಒಂದು ಭಾರಿ ಅಕ್ರಮ ಶೆಡ್ ಹಾಗೂ ಕಟ್ಟಡ ನಿರ್ಮಾಣ ನಡೆದಿದ್ದು, ಹಿಂದೂ ಜಾಗರಣ ವೇದಿಕೆಯು 2012 ರಿಂದಲೇ ಇದರ ವಿರುದ್ಧವಾಗಿ ಹೋರಾಟ ನಡೆಸುತ್ತಿದೆ. 

 

ಆದರೂ ಸಹ ಅಧಿಕಾರಿಗಳ ನಿರ್ಲಕ್ಷ್ಯ ಭಾವದಿಂದ ಜಾಗದ ದುರ್ಬಳಕೆ ಇಂದಿಗೂ ಮುಂದುವರಿಯುತ್ತಿದೆ.

 

2023ರಲ್ಲಿ ಇದೇ ಜಾಗದಲ್ಲಿ ಮತ್ತೆ ಅಕ್ರಮವಾಗಿ ಮನೆ ನಿರ್ಮಾಣ ಪ್ರಾರಂಭವಾಯಿತು. ಪೆರಾಜೆ ಗ್ರಾಮದ ರಿಯಾಜ್ ಎಂಬವರು ಗೋಮಾಳದಲ್ಲಿ ಸಿಮೆಂಟ್ ಕಂಬಗಳ ಮೂಲಕ ಶೆಡ್ ನಿರ್ಮಿಸಲು ಮುಂದಾದಾಗ, ತಹಶಿಲ್ದಾರರಿಗೆ ವಿಷಯ ತಿಳಿಸಲಾಯಿತು. ಆದರೆ ಯಾವುದೇ ಕಾನೂನು ಕ್ರಮ ಕೈಹೊಂದಿರಲಿಲ್ಲ. ತೆಂಗು, ಬಾಳೆ ಗಿಡಗಳನ್ನು ನೆಟ್ಟು ಗೋಡೆ ಕಟ್ಟಲು ಮುಂದಾದಾಗ RI ಬಂದು ತಡೆದರೂ, ರಾತ್ರಿ ವೇಳೆ ಕೆಲಸ ಮುಂದುವರಿಯುತಿತ್ತು.  

 

ಇದನ್ನು ಖಂಡಿಸಿ ಗ್ರಾಮಸ್ಥರು ಹಾಗೂ ಗೋಪಾಲಕ ಸೇರಿ "ಸ್ವಾಗತನಗರ ಗೋಮಾಳ ಸಂರಕ್ಷಣಾ ಸಮಿತಿ" ಸ್ಥಾಪಿಸಿ ಹೋರಾಟ ಆರಂಭಿಸಿದರು.

 

 

ಬಂಟ್ವಾಳ ತಹಶಿಲ್ದಾರ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು. ಪರಿಣಾಮವಾಗಿ, ತಹಶಿಲ್ದಾರರು RIಗೆ ಕಟ್ಟಡ ತೆರವುಗೆ ಆದೇಶವನ್ನಿತ್ತರು. ಆದರೆ ರಾಜಕೀಯದ ಒತ್ತಡಕ್ಕೆ ಮಣಿದ RI, ತಹಶಿಲ್ದಾರರ ಆದೇಶವನ್ನು ಪಾಲಿಸದೆ ಕಟ್ಟಡ ತೆರವು ಮಾಡಲಿಲ್ಲ. 

 

2025ರ ಏಪ್ರಿಲ್‌ನಲ್ಲಿ ಮತ್ತೊಮ್ಮೆ ರಾತ್ರೋರಾತ್ರಿ ಉದ್ದಾರ ಕಾರ್ಯ ಮುಂದುವರಿಯುತ್ತಿದ್ದಂತೆ, ಹಿತರಕ್ಷಣಾ ಸಮಿತಿ ಮತ್ತೊಮ್ಮೆ ಅಧಿಕಾರಿಗಳಿಗೆ ದೂರನ್ನು ನೀಡಿತು.

 

 ತಹಶಿಲ್ದಾರ್ ಕೂಡಲೇ ಸ್ಪಂದಿಸಿ, ಸ್ಥಳಕ್ಕೆ RI, VA, PDOರನ್ನು ಕಳಿಸಿದರು.

 

ಸತ್ಯ ಮತ್ತು ನ್ಯಾಯಕ್ಕಾಗಿ ಧ್ವನಿಯಾದ ಜನಶಕ್ತಿ

ಗೋಮಾಳ ಹಿತರಕ್ಷಣಾ ಸಮಿತಿಯ ಪ್ರಮುಖ ಬಿ. ಗಣರಾಜ ಭಟ್ ಅವರು ಸ್ಥಳಕ್ಕೆ ಬಂದು ದಾಖಲೆಗಳೊಂದಿಗೆ RIಗೆ ಸ್ಪಷ್ಟನೆಯನ್ನು ನೀಡಿದರು.

 

 “ಅಧಿಕಾರಿಗಳು ರಾಜಕೀಯದ ಬೆದರಿಕೆಗಳಿಗೆ ಭಯಪಡದೆ, ಧರ್ಮ ಮತ್ತು ಕಾನೂನಿನ ಪ್ರಕಾರ ನಡೆದು ಎಲ್ಲಾ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು,” ಎಂದು ಅವರು ಒತ್ತಾಯಿಸಿದರು.

 

 ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ಅಕ್ಷಯ್ ರಾಜಪೂತ್ ಅವರು ಅಕ್ರಮ ಕಟ್ಟಡ ತೆರವು ಗೊಳಿಸುತ್ತೇವೆಂದು ಹೇಳಿ ನಮ್ಮನ್ನು ಮೋಸ ಗೊಳಿಸಿದ್ದು ಸಾಕು ,ಯಾವಾಗ ತೆರವು ಗೊಳಿಸುತ್ತೀರೆಂದು ದಿನಾಂಕ ನಿಗದಿ ಪಡಿಸಿ ನಂತರ ತೆರಳಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

 

ಹಿತರಕ್ಷಣಾ ಸಮಿತಿಯ ಮುಖಂಡರು ರೂಪೇಶ್ ಪೂಜಾರಿ,ನರಸಿಂಹ ಮಾಣಿ ವಿಶ್ವನಾಥ, ಶಿವರಾಮ, ಲಿತೀಶ್, ಮಹೇಂದ್ರ ಮೊದಲಾದವರು ಈ ಹೋರಾಟದಲ್ಲಿ ಸಕ್ರಿಯರಾಗಿದ್ದರು.