ಪ್ರವೇಶ ಪರೀಕ್ಷೆಗಳ ಸಮಯದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತಹ ಹಲವಾರು ವರ್ತನೆಗಳ ಪ್ರಕರಣಗಳು ಬೆಳಕಿಗೆ ಬಂದಿದ್ದು, ವಿದ್ಯಾರ್ಥಿ ಪರಿಷತ್ ಇದನ್ನು ತೀವ್ರವಾಗಿ ಖಂಡಿಸಿದೆ.
ಬೀದರ್ ಹಾಗೂ ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಕೆಲವು ವಿದ್ಯಾರ್ಥಿಗಳ ಜನಿವಾರ ಹಾಗೂ ಕೈ ದಾರಗಳನ್ನು ಬಲವಂತವಾಗಿ ತೆಗೆಯ ಬೇಕೆಂದು ಇಲ್ಲದಲ್ಲಿ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎನ್ನುವಂತಹ ನಿರ್ಭಂದ ಹೇರಿರುವ ಘಟನೆಗಳು ನಡೆದಿದ್ದು, ಇದರಿಂದ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳಿಗೆ ಆಘಾತ ಉಂಟಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮಂಗಳೂರು ಮಹಾನಗರ ಕಾರ್ಯದರ್ಶಿ ಮೋನಿಶ್ ತುಮಿನಾಡ್ ಅವರು, “ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನ್ಯಾಯ ಹಾಗೂ ನಿಷ್ಠೆಯೊಂದಿಗೆ ನಡೆಸಲು ನಿಬಂಧನೆಗಳು ಅಗತ್ಯ.
ಆದರೆ ಮಾರ್ಗಸೂಚಿಗಳಲ್ಲೇ ಉಲ್ಲೇಖವಿಲ್ಲದ ನಿರ್ಬಂಧನೆಗಳನ್ನು ಜಾರಿಗೊಳಿಸುವುದು ತಪ್ಪು ಮತ್ತು ಧರ್ಮ ಭಾವನೆಗಳಿಗೆ ತೀವ್ರ ಅವಮಾನ” ಎಂದು ಹೇಳಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳ ಅಸೂಕ್ತ ನಡೆ ವಿದ್ಯಾರ್ಥಿಗಳ ಮನೋಸೈರ್ಯವನ್ನು ಕುಗ್ಗಿಸಬಹುದು ಆದ್ದರಿಂದ ಮಾಹಿತಿ ಇಲ್ಲದ ನಿರ್ಬಂಧನೆಗಳನ್ನು ವಿಧಿಸುವುದು ಸರಿಯಲ್ಲ ಇದು ಶಿಕ್ಷಣ ಕ್ಷೇತ್ರದಲ್ಲಿ ಅನಗತ್ಯ ಗೊಂದಲವನ್ನು ಉಂಟುಮಾಡುವ ಸಾಧ್ಯತೆಯೂ ಇದೆ ಎಂದು ಹೇಳಿದ್ದಾರೆ.
ಈ ಕುರಿತು ಸರ್ಕಾರ ಹಾಗೂ ಪರೀಕ್ಷಾ ಮಂಡಳಿಗಳು ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಬೇಕು ಎಂದು ಹೇಳಿದೆ.
ಇದಲ್ಲದೆ, ಪ್ರಕರಣಕ್ಕೆ ಕಾರಣರಾದ ಪರೀಕ್ಷಾ ಕೇಂದ್ರದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದಾಗಿ ವಿದ್ಯಾರ್ಥಿ ಪರಿಷತ್ ಅಗ್ರಹ ವ್ಯಕ್ತ ಪಡಿಸಿದೆ.