ತಣ್ಣೀರುಬಾವಿ- ಬೆಂಗ್ರೆ ರಸ್ತೆಗೆ ಶೀಘ್ರದಲ್ಲಿ ಸುಗಮ ಸಂಚಾರದ ಹೊಸ ಮಾರ್ಗ; ಶಾಸಕರಾದ ವೇದವ್ಯಾಸ ಕಾಮತ್ ಅವರಿಂದ ಕಾಮಗಾರಿಗೆ ಭವ್ಯ ಚಾಲನೆ

  • 20 Apr 2025 05:10:40 PM

ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯ 11ನೇ ಪಣಂಬೂರು ವಾರ್ಡಿನ ತಣ್ಣೀರುಬಾವಿ ತೋಟದಿಂದ ಬೆಂಗ್ರೆ ಮುಖ್ಯ ರಸ್ತೆಯ ಮೂಲಕ ಬೆಂಗ್ರೆ ಫೆರ್ರಿ ಜೆಟ್ಟಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಗುದ್ದಲಿ ಪೂಜೆ ನೆರವೇರಿಸಿದರು. 

 

ಈ ರಸ್ತೆಯ ಅಭಿವೃದ್ಧಿಯಿಂದ ಸ್ಥಳೀಯರಿಗೆ ಉತ್ತಮ ಸಂಪರ್ಕ ವ್ಯವಸ್ಥೆ ಒದಗಲಿದೆ. "ಈ ರಸ್ತೆ ಅಭಿವೃದ್ಧಿಯ ಅಗತ್ಯತೆಯನ್ನು ಇಲ್ಲಿನ ನಿವಾಸಿಗಳು ನಿರಂತರವಾಗಿ ಹೇಳಿಕೊಂಡಿದ್ದರು. ನಿಕಟ ಪೂರ್ವ ಪಾಲಿಕೆ ಸದಸ್ಯೆ ಸುನೀತಾ ಅವರು ಈ ವಿಷಯವನ್ನು ನನ್ನ ಗಮನಕ್ಕೆ ತಂದು, ಈ ಯೋಜನೆಗಗಾಗಿ ಒತ್ತಾಯಿಸಿದ್ದಾರೆ ಎಂದು ಕಾರ್ಯಕ್ರಮದ ವೇಳೆಯಲ್ಲಿ ಮಾತನಾಡಿದ ಅವರು ಹೇಳಿದರು.

 

 ಈಗ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಉಪಯುಕ್ತವಾಗಲಿ ಎಂದು ಆಶಿಸಿದರು.

 

ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷರಾದ ವರದರಾಜ್ ಬೆಂಗ್ರೆ, ಮಂದಿರದ ಅಧ್ಯಕ್ಷರುಗಳಾದ ಸುಧಾಕರ ಸಾಲಿಯಾನ್, ಪ್ರಕಾಶ್ ಪುತ್ರನ್, ನವೀನ್ ಕುದ್ರೋಳಿ, ವಿಕ್ರಾಂತ್ ಕುದ್ರೋಳಿ, ಶ್ರೀಕಾಂತ್ ಬೆಂಗ್ರೆ, ಸೆಲೀಂ ಕಸಬಾ, ಸತ್ತಾರ್, ಹಸನಬ್ಬ, ಸೆಮೀರ್, ರಿಯಾಜ್, ಶಾಫಿ, ಮುತ್ತಮ್ಮ, ದಾಕ್ಷಾಯಿಣಿ, ಹೊನ್ನಮ್ಮ, ರಾಧಾ, ಕವಿತಾ ಹಾಗೂ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು