ಬೀದರ್: ಕೆಸಿಇಟಿ ಪರೀಕ್ಷೆಯಲ್ಲಿ ಭಾಗವಹಿಸಲು ಜನಿವಾರ ತೆಗೆಯಬೇಕು ಎಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯಲಾಗದೆ ಹಿಂತಿರುಗಿದ್ದ ಬೀದರ್‌ನ ಬ್ರಾಹ್ಮಣ ವಿದ್ಯಾರ್ಥಿ ಚಿ. ಸುಚಿದ್ರತ್ ಕುಲಕರ್ಣಿಗೆ ಉಚಿತ ಸೀಟು ಘೋಷಿಸಿರುವ ರಾಜ್ಯದ ಆರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಈಶ್ವರ ಖಂಡ್ರೆ ಅವರ ಮಾನವೀಯ ನಡೆಗೆ ಮಹಾಸಭಾ ಶ್ಲಾಘನೆ ವ್ಯಕ್ತಪಡಿಸಿದೆ.
ಬೀದರ್ ನಗರದ ಸಾಯಿ ಸ್ಫೂರ್ತಿ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸುಚಿದ್ರತ್, ತನ್ನ ಧಾರ್ಮಿಕ ಭಾವನೆಗಳನ್ನು ಕಾಪಾಡಿಕೊಳ್ಳಲು ಜನಿವಾರ ತೆಗೆದುಹಾಕಲು ನಿರಾಕರಿಸಿದ್ದ ಕಾರಣದಿಂದ ಪರೀಕ್ಷಾ ಕೇಂದ್ರದಿಂದ ವಾಪಸ್ ಕಳುಹಿಸಲ್ಪಟ್ಟ ಘಟನೆ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು .
ಈ ಘಟನೆಯ ಬಗ್ಗೆ ತ್ವರಿತ ಸ್ಪಂದನೆ ನೀಡಿದ ಸಚಿವ ಖಂಡ್ರೆ ಅವರು, ವಿದ್ಯಾರ್ಥಿಯ ಮನೆಗೆ ತೆರಳಿ ಆತ್ಮಸ್ಥೈರ್ಯ ತುಂಬಿದ್ದಲದೆ ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ವಿದ್ಯಾಲಯದಲ್ಲಿ ಉಚಿತ ಸೀಟು ನೀಡುವ ಘೋಷಣೆ ಮಾಡಿ ಮಾನವೀಯತೆಗೆ ಮಾದರಿಯಾಗಿದ್ದಾರೆ.
ಅದಲ್ಲದೇಇಂತಹ ಘಟನೆಗಳು ಮುಂದುವರಿಯದಂತೆ ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡಿರುತ್ತಾರೆ. ಸಚಿವರ E ಔದಾರ್ಯಕ್ಕೆ ಮಹಾಸಭಾ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ.
ಮಹಾಸಭಾಧ್ಯಕ್ಷ ಎಸ್. ರಘುನಾಥ್ ಅವರು, ಈ ಕ್ರಮಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ