ನವ ದೆಹಲಿ: ಪೋಪ್ ಫ್ರಾನ್ಸಿಸ್ ನಿಧನದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ.
ಏಪ್ರಿಲ್ 21, 22 ಹಾಗೂ ಪೋಪ್ ಅವರ ಅಂತ್ಯಕ್ರಿಯೆ ನಡೆಯುವ ದಿನವನ್ನು ಶೋಕ ದಿನ ಎಂದು ಕೇಂದ್ರ ಸರ್ಕಾರ ಸೋಮವಾರ ರಾತ್ರಿ ಪ್ರಕಟಣೆ ಹೊರಡಿಸಿದೆ.
ಈ ಅವಧಿಯಲ್ಲಿ ಭಾರತದಾದ್ಯಂತ ಶ್ರದ್ಧಾಂಜಲಿಯೂ, ಮೌನಪೂರ್ವಕ ಗೌರವವೂ ಸಲ್ಲಿಸಲಾಗುವುದು.
ಈ ಶೋಕದಿನಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗುವುದು. ಎಲ್ಲಾ ಸರ್ಕಾರಿ ಕಟ್ಟಡಗಳು ಈ ನಿಯಮ ಪಾಲಿಸುವಂತಿದ್ದು, ಯಾವುದೇ ರೀತಿಯ ಸರ್ಕಾರಿ ಕಾರ್ಯಕ್ರಮಗಳು ಜರುಗುವಂತಿಲ್ಲ ಎಂದುವಿ ದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ಪ್ರಕಟಿಸಿದೆ.
ಪೋಪ್ ಫ್ರಾನ್ಸಿಸ್ ಅವರು ಲ್ಯಾಟಿನ್ ಅಮೆರಿಕದ ಮೂಲಕ ಪೋಪ್ ಸ್ಥಾನವನ್ನು ಭುಜಸಿದ ಮೊದಲ ಧರ್ಮಗುರು ಎಂಬ ಇತಿಹಾಸ ದಾಖಲಿಸಿದ್ದಾರೆ.
88 ವರ್ಷದ ವಯಸ್ಸಿನಲ್ಲಿ ಅವರು ಸೋಮವಾರ ಬೆಳಿಗ್ಗೆ 7:35ಕ್ಕೆ ವ್ಯಾಟಿಕನ್ ನಗರದಲ್ಲಿ ನಿಧನರಾದರು. ಅವರ ಆದರ್ಶಗಳು ಹಾಗೂ ಶಾಂತಿಯ ಸಂದೇಶಗಳು ಇಡೀ ವಿಶ್ವದಾದ್ಯಂತ ಪ್ರತಿಧ್ವನಿಸುತ್ತಿವೆ.