2003ರ ಮೇ 2ರಂದು ಕೋಝಿಕ್ಕೋಡ್ ಜಿಲ್ಲೆಯ ಮರಾಡ್‌ನಲ್ಲಿ ನಡೆದ ಹೃದಯವಿದ್ರಾವಕ ಘಟನೆ ಇಂದಿಗೂ ನಮ್ಮೆಲ್ಲರ ಮನದಲ್ಲಿ ನೋವಾಗಿಯೇ ಉಳಿದಿದೆ.
ಆ ದಿನ ಎಂಟು ಮಂದಿ ಹಿಂದೂ ಮೀನುಗಾರರನ್ನು, ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳಿಂದ, ನಿಷೇಧಿತ NDF (ಇಂದಿನ ಪಾಪ್ಯುಲರ್ ಫ್ರಂಟ್) ನೇತೃತ್ವದಲ್ಲಿ ನಿರ್ದಯವಾಗಿ ಹತ್ಯೆಗೊಳಗಾದರು.
ಕರಾವಳಿಯ ಹಿಂದೂ ಸಮುದಾಯದ ವಿರುದ್ದದ ಈ ದಾಳಿ ಹಿಂದಿನ ಗಂಭೀರ ಪಿತೂರಿಯ ಭಾಗವಾಗಿತ್ತು.
ಭಯೋತ್ಪಾದನೆಯ ಈ ಕೃತ್ಯವು ಕೇವಲ ವ್ಯಕ್ತಿಗಳ ಹತ್ಯೆಗಲ್ಲ, ಪರಂಪರೆ, ನಂಬಿಕೆ ಮತ್ತು ಸಮುದಾಯದ ಮೇಲೆ ನಡೆದ ದಾಳಿ ಆಗಿರುತ್ತದೆ.
ಇದಾದ ಬಳಿಕ ನ್ಯಾಯಕ್ಕಾಗಿ ನಡೆದ ಹೋರಾಟದ ಮುಂದೂಡಿಕೆಯು ಆಘಾತಕರವಾಗಿತ್ತು.
ನಾನಾ ಬೇಡಿಕೆಗಳ ನಡುವೆಯೂ, ಸರ್ಕಾರಗಳು ಹಾಗೂ ರಾಜಕೀಯ ಪಕ್ಷಗಳು ಈ ಪ್ರಕರಣವನ್ನು ಮಸುಕು ಮಾಡಲು ಸಹ ಪ್ರಯತ್ನಿಸಿದವು..
ಸಿಬಿಐ ತನಿಖೆ, ನ್ಯಾಯಾಂಗ ಆಯೋಗದ ಶಿಫಾರಸುಗಳು, ಮತ್ತು ಹೈಕೋರ್ಟ್‌ನ ಸೂಚನೆಗಳ ನಂತರವೂ, ತನಿಖೆಯ ಪ್ರಗತಿ ನಿಧಾನವಾಗಿದ್ದು, ರಾಜಕೀಯ ಒತ್ತಡಗಳು ಸ್ಪಷ್ಟವಾಗಿದ್ದವು.
ನೂರಾರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದರೂ, ಸತ್ಯದ ಸಂಪೂರ್ಣ ಬೆಳಕು ಇನ್ನೂ ಬೆಳಕಿಗೆ ಬರಲಿಲ್ಲ.
ಭಯೋತ್ಪಾದಕ ಸಂಘಟನೆಗಳ ಬೆಂಬಲದ ಕಾರಣ ರಾಜಕೀಯ ನಾಯಕರು ಈ ಪಿತೂರಿಗೆ ಹೊಣೆಗಾರರನ್ನು ಪಾರದರ್ಶಕವಾಗಿ ಹೊರತೆಗೆಯಲಿಲ್ಲ.
ಈ ಹಿನ್ನೆಲೆಯಲ್ಲಿ, ಮರಾಡ್ ಹತ್ಯಾಕಾಂಡವು ಕೇವಲ ಇತಿಹಾಸದ ಪುಟವಲ್ಲ, ಇಂದಿನ ಸಮಾಜಕ್ಕೆ ಎಚ್ಚರಿಕೆಯ ಘಂಟೆಯಾಗಿದೆ.
ಪಿಡುಗಿನಂತಹ ಭಯೋತ್ಪಾದನೆಯ ವಿರುದ್ಧ ನಾವೆಲ್ಲರೂ ಒಂದಾಗಿ ನಿಲ್ಲಬೇಕಾದ ಸಮಯವಾಗಿರುತ್ತದೆ . ಆದುದರಿಂದ ಇದರ ಸ್ಮರಣಾರ್ಥವಾಗಿ ಮೇ 2, ಶುಕ್ರವಾರ ಸಂಜೆ 6:30ಕ್ಕೆ, ಪ್ರತಾಪನಗರದ ಗೌರಿ ಗಣೇಶ ಮಂದಿರದಲ್ಲಿ ನಡೆಯುವ ಮರಾಡ್ ಸಂಸ್ಮರಣಾ ಸಮಾವೇಶದಲ್ಲಿ ನಾವೆಲ್ಲರೂ ಭಾಗವಹಿಸೋಣ. ಶಕ್ತಿಯಂತಾಗಿ ಒಟ್ಟಾಗಿ ನಿಂತು, ಸತ್ಯಕ್ಕಾಗಿ ಧ್ವನಿ ಎತ್ತೋಣ ಎಂದು ಹಿಂದೂ ಐಕ್ಯವೇದಿ ಮಂಜೇಶ್ವರ ತಾಲೂಕು ಸಮಿತಿ ಎಲ್ಲ ಹಿಂದೂ ಬಂದವರನ್ನು ಆಹ್ವಾನಿಸಿದೆ.