ಎಡನೀರು ಶ್ರೀ ಗಳು ಸಂಚರಿಸುತ್ತಿದ್ದ ವಾಹನಕ್ಕೆ ಕಿಡಿಗೇಡಿಗಳಿಂದ ದಾಳಿ -ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಹಿಂದೂ ಮಹಾ ಸಭಾ ಅಧ್ಯಕ್ಷ ಡಾ.ಎಲ್ ಕೆ ಸುವರ್ಣ ಆಗ್ರಹ.

  • 05 Nov 2024 12:58:47 PM

ಎಡನೀರು: ಕಾಸರಗೋಡು ಜಿಲ್ಲೆ ಯ ಎಡನೀರು ಮಠದ ಸ್ವಾಮೀಜಿ ಅವರ ವಾಹನಕ್ಕೆ ಕಿಡಿಗೇಡಿಗಳಿಂದ ದಾಳಿಯಾದ ದುಷ್ಕೃತ್ಯಕ್ಕೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಹಿಂದೂ ಮಹಾ ಸಭಾ ಅಧ್ಯಕ್ಷ ಡಾ.ಎಲ್. ಕೆ ಸುವರ್ಣ ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ.

 

ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಕಾರಿಗೆ ನಿನ್ನೆ ದಾಳಿ ನಡೆದಿದ್ದು ಈ ಘಟನೆಯನ್ನು ಹಿಂದೂ ಮಹಾ ಸಭಾ -ಕರ್ನಾಟಕ ಘಟಕವು ಖಡಾ ಖಂಡಿಸುತ್ತದೆ 

 

ಸಾರ್ವಜನಿಕ ಕಾರ್ಯಕ್ರಮದಿಂದ ಹಿಂದಿರುಗುವಾಗ ಬೋವಿಕಾನ - ಇರಿಯಣ್ಣಿ ಮಾರ್ಗ ಮಧ್ಯೆ ವಾಹನವನ್ನು ತಡೆದ ಮತಾಂದರ ತಂಡವೊಂದು ತಗಾದೆ ಎಬ್ಬಿಸಿತ್ತು. ಇದೇ ದಾರಿಯಲ್ಲಿ ಕಾರ್ಯಕ್ರಮ ಮುಗಿಸಿ ಮರಳಿ ಬರುವಾಗ ಇರಿಯಣ್ಣಿಯಿಂದಲೇ ಹಿಂಬಾಲಿಸಿದ ಬಂದವರ ಪೈಕಿ ಬಾವಿಕೆರೆ ಎಂಬಲ್ಲಿ ದೊಣ್ಣೆಯಿಂದ ಕಾರಿನ ಗಾಜಿಗೆ ಹೊಡೆದರೆಂದೂ, ಕಾರಿನ ಗಾಜಿಗೆ ಹಾನಿಯಾಗಿದೆಯೆಂದೂ ತಿಳಿದುಬಂದಿದೆ. ಈ ಸಂದರ್ಭ ಸ್ವಾಮೀಜಿಯವರು ಕಾರು ನಿಲ್ಲಿಸದೇ ಶಾಂತರಾಗಿ ಮುಂದುವರಿದಿದ್ದಾರೆ ಎಂಬ ಮಾಹಿತಿ ಕೂಡ ದೊರಕಿದೆ .

 

ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ವಾಹನದ ಮೇಲೆ ದುಷ್ಕರ್ಮಿಗಳ ದಾಳಿ ಇದು ಹಿಂದೂ ಸಮಾಜದ ಮೇಲೆ ಆಗಿರುವ ದಾಳಿ ಇದನ್ನು ಹಿಂದೂ ಸಮಾಜ ಸಹಿಸಲ್ಲ ಲಕ್ಷಾಂತರ ಹಿಂದೂಗಳು ಭಕ್ತಿಯಿಂದ ಆರಾಧಿಸುವ ಎಡನೀರು ಸಂಸ್ಥಾನದ ಸ್ವಾಮೀಜಿಗಳ ವಾಹನದ ಮೇಲಾದ ಆದ ದಾಳಿಯಿಂದಾಗಿ ಹಿಂದೂ ಸಮಾಜವು ಆಕ್ರೋಶಗೊಂಡು ಇಂತಹ ದುಷ್ಕೃತ್ಯ ಇನ್ನು ಮಾಡಲು ಭಯಪಡುವಂತೆ ಈ ಕೃತ್ಯಕ್ಕೆ ಶಿಕ್ಷೆಯಾಗಬೇಕೆಂದು,ಕೇಂದ್ರ ಸರಕಾರಕ್ಕೆ ಈ ಘಟನೆಯ ವರದಿ ಪಡೆದು ಸೂಕ್ತ ಭದ್ರತೆಯನ್ನು ನೀಡಲು ಕೇರಳ ಸರಕಾರ ಕ್ಕೆ ಆದೇಶ ನೀಡಬೇಕೆಂದು ಹಿಂದೂ ಮಹಾ ಸಭಾ ಒತ್ತಾಯಿಸುತ್ತಿದೆ.