ಸುಳ್ಯ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರದ ವತಿಯಿಂದ ಕಾಶ್ಮೀರದ ಪಹಾಲ್ಗಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ಪ್ರವಾಸಿಗರಿಗೆ ಮೌನಾಚರಣೆ ಹಾಗೂ ಶ್ರದ್ಧಾಂಜಲಿ ಸಭೆ ಕೆವಿಜಿ ಕ್ಯಾಂಪಸ್ ಬಳಿ ನಡೆಯಿತು.
ಕಾರ್ಯಕ್ರಮದಲ್ಲಿ ಹಿರಿಯ ಕಾರ್ಯಕರ್ತರಾದ ಲೋಹಿತ್ ಬಿಳಿಯಾರು ಅವರು ದಾಳಿಯ ಗಂಭೀರತೆಯ ಕುರಿತು ಹಾಗೂ ಭವಿಷ್ಯದಲ್ಲಿ ರಕ್ಷಣಾ ಪಡೆಗಳು ತೆಗೆದುಕೊಳ್ಳಬಹುದಾದ ಕಾರ್ಯತಂತ್ರಗಳ ಬಗ್ಗೆ ವಿವರವಾಗಿ ಹೇಳಿದರು.
ತಾಲ್ಲೂಕು ಸಂಚಾಲಕರಾದ ನಂದನ್ ಪವಿತ್ರಮಜಲು ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಭರತ್ ಅಡೂರ್ ಅವರು ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ವಂದನೆ ಸಲ್ಲಿಸಿದರು.
ಸಭೆಯಲ್ಲಿ ನಗರ ಕಾರ್ಯದರ್ಶಿ ಪ್ರೀತೇಶ್, ಹಾಸ್ಟೆಲ್ ಪ್ರಮುಖ್ ಸುಹಾಸ್ ಹಾಗೂ ಸದಸ್ಯರಾದ ಕೀರ್ತನ್, ಬಸವರಾಜ್, ಹೃತ್ವಿಕ್, ಹರ್ಷ, ವಿಕಾಸ್, ಮತ್ತು ತಮ್ಮಯ್ಯ ಉಪಸ್ಥಿತರಿದ್ದರು.