ಮಂಗಳೂರು: ತಣ್ಣೀರುಬಾವಿ ಅಕ್ರಮ ಸಾಗಾಟಕ್ಕೆ ಕಡಿವಾಣ: ಸ್ಥಳೀಯರ ನೆರವಿನಿಂದ 3 ಯುವಕರು ಪೊಲೀಸ್ ವಶಕ್ಕೆ!

  • 26 Apr 2025 03:27:39 PM

ಮಂಗಳೂರು: ಇತ್ತೀಚೆಗೆ ಕರಾವಳಿಯಲ್ಲಿ ಗೋಹತ್ಯೆ ಮತ್ತು ಅಕ್ರಮ ಗೋಸಾಗಾಟ ಪ್ರಕರಣಗಳು ಸಂಖ್ಯೆ ಹೆಚ್ಚುತ್ತಲೇ ಇದೆ.  ಮಂಗಳೂರಿನಲ್ಲಿಯೂ ಇಂತಹ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

 

ಕೂಳೂರು ಸೇತುವೆ ಬಳಿ, ತಣ್ಣೀರುಬಾವಿಗೆ ಹೋಗುವ ರಸ್ತೆಯಲ್ಲಿ ಯುವಕರು ರಾಜಾರೋಷವಾಗಿ ದನಗಳನ್ನು ಅಕ್ರಮವಾಗಿ ಸಾಗಿಸಲು ಪ್ರಯತ್ನಿಸುತ್ತಿದ್ದರು. 

 

ಈ ವೇಳೆ ಸ್ಥಳೀಯರ ಸಂಶಯದ ಮೇರೆಗೆ ಗಮನಹರಿಸಿ ನೋಡಿದಲ್ಲಿ ಅಕ್ರಮ ಗೊ ಸಾಗಾಟಕ್ಕೇಪ್ರಯತ್ನಿಸುವುದಾಗಿ ತಿಳಿದು ಬಂದು ಅವರನ್ನು ಸ್ಥಳದಲ್ಲೇ ರೆಡ್ ಹ್ಯಾಂಡ್ ಹಿಡಿದಿದ್ದಾರೆ.

 

ಯುವಕರು ದನಗಳಿಗೆ ಆಹಾರ ನೀಡುತ್ತಾ, ಸಂಶಯ ಮೂಡದಂತೆ ವಾಹನದಲ್ಲಿ ತುಂಬಿಸಲು ಯತ್ನಿಸುತ್ತಿರುವುದನ್ನು ಕಂಡ ಸ್ಥಳೀಯರ ಸಕಾಲಿಕ ಜಾಗೃತತೆಯಿಂದ, ಈ ಅಕ್ರಮ ಕ್ರಿಯೆಯನ್ನು ತಡೆದಿದ್ದಾರೆ

 

 ಮತ್ತು ಆ ಯುವಕರನ್ನು ತಕ್ಷಣವೇ ಪೊಲೀಸರಿಗೆ ಹಿಡಿದೊಪ್ಪಿಸಿದ್ದಾರೆ.

 

ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.