ಪುತ್ತೂರಿನಲ್ಲಿ ಸ್ಕೂಟರ್ ಗೆ ಲಾರಿ ಢಿಕ್ಕಿ; ಸ್ಕೂಟರ್ ಸವಾರ ದಾರುಣ ಸಾವು!

  • 27 Apr 2025 05:35:08 PM

ಪುತ್ತೂರು: ಪುತ್ತೂರು ತಾಲೂಕಿನ ಮಾಯ್ ದೆ ದೇವುಸ್ ಚರ್ಚ್ ಎದುರು ಸ್ಕೂಟರ್‌ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ದುರ್ಘಟನೆ ನಿನ್ನೆ ಸಂಭವಿಸಿದೆ.

 

 ದುರ್ಘಟನೆಯಲ್ಲಿ ದಾರುಣ ಅಂತ್ಯ ಕಂಡ ದುರ್ದೈವಿ, ಕೆಮ್ಮಿಂಜೆ ಗ್ರಾಮದ ಫ್ರಾನ್ಸಿಸ್ ಲೂವಿಸ್ ಎಂದು ತಿಳಿದು ಬಂದಿದೆ.

ಲೂವಿಸ್ ಅವರು ತಮ್ಮ ಸ್ಕೂಟರ್‌ನಲ್ಲಿ ಕೆಮ್ಮಿಂಜೆಯಿಂದ ಪುತ್ತೂರಿನ ಚರ್ಚ್ ಕಡೆಗೆ ಪ್ರಯಾಣಿಸುತ್ತಿದ್ದಾಗ, ದರ್ಬೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಲಾರಿ ಅವರ ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಲೂವಿಸ್ ಬಲವಾದ ಗಾಯಗಳಿಗೆ ಒಳಗಾದರು.

ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. 

ಈ ಸಂಬಂಧ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.