ದ.ಕ: ಚಂಡಮಾರುತದ ಪರಿಣಾಮದಿಂದಾಗಿ ಇಂದಿನಿಂದಲೇ ಕರ್ನಾಟಕದಾದ್ಯಂತ ಭಾರಿ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಹವಾಮಾನ ಇಲಾಖೆ ಇನ್ನು ಮುಂದುವರಿದ ಒಂದು ವಾರಗಳ ವರೆಗೆ ಮಳೆಯ ಮುನ್ಸೂಚನೆ ನೀಡಿರುತ್ತದೆ
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಿನ್ನೆ ಗುಡುಗು ಸಿಡಿಲು ಗಾಳಿ ಸಹಿತ ಧಾರಾಕಾರ ಮಳೆಯು ಸುರಿಯಿತು. ಬೆಂಗಳೂರಿನಲ್ಲೂ ಕೂಡ ಮೋಡ ಕವಿದ ವಾತಾವರಣವಾಗಿತ್ತು
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಿಂದಾಗಿ ಅನೇಕ ಪ್ರದೇಶಗಳಲ್ಲಿ ಹಾನಿ ಉಂಟಾಗಿದ್ದು, ವಿದ್ಯುತ್ ವ್ಯತ್ಯಯದಂತಹ ಅಸೌಕರ್ಯಗಳು ಕೂಡ ಸಂಭವಿಸಿದವು.
ಇಂದೂ ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಮುಂದಿನ ಒಂದು ವಾರದವರೆಗೂ ಭಾರಿ ಮಳೆಯ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ರಾಜ್ಯದ ಕೆಲವೆಡೆ 'ಯೆಲ್ಲೋ ಅಲರ್ಟ್' ಘೋಷಿಸಿದೆ.