ಉಡುಪಿಯಲ್ಲಿ ಹಿಟ್ ಆ್ಯಂಡ್ ರನ್; ರಸ್ತೆ ದಾಟುತ್ತಿದ್ದ ಮಹಿಳೆಗೆ ಬೈಕ್ ಢಿಕ್ಕಿ, ಮಹಿಳೆಗೆ ತೀವ್ರ ಗಾಯ! ಸವಾರ ಪರಾರಿ!

  • 27 Apr 2025 06:39:06 PM

ಉಡುಪಿ: ಕಲ್ಸಂಕ ಸಮೀಪದಲ್ಲಿ ಅಂಬಾಗಿಲು-ಉಡುಪಿ ರಸ್ತೆಯ ಪಾಡಿಗಾರು ಬಳಿ ದಾರುಣ ಘಟನೆಯೊಂದು ಸಂಭವಿಸಿದೆ.

 

 ರಸ್ತೆ ದಾಟುತ್ತಿದ್ದ ಲಲಿತಾ ಆಚಾರ್ಯ ಎಂಬ ಮಹಿಳೆಯನ್ನು ಅತೀವೇಗದಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರನು ಢಿಕ್ಕಿ ಹೊಡೆದು ಪರಾರಿಯಾದ ದಾರುಣ ಘಟನೆ ಸಂಭವಿಸಿದೆ.

 

  ಘಟನೆಯಲ್ಲಿ ಮಹಿಳೆಗೆ ತೀವ್ರ ಗಾಯಗಳಾಗಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಘಟನಾ ವೇಳೆ, ರಸ್ತೆಯಲ್ಲಿ ಸಂಚರಿಸುತ್ತಿದ್ದ ರಿಕ್ಷಾ ಚಾಲಕನು ಮಹಿಳೆಯನ್ನು ಗಮನಿಸಿ ನಿಧಾನವಾಗಿ ವಾಹನ ಚಲಾಯಿಸುತ್ತಿದ್ದ ಆದರೆ, ರಿಕ್ಷಾವನ್ನು ಓವರ್‌ಟೇಕ್ ಮಾಡುವ ಅವಸರದಲ್ಲಿ ಅತೀವೇಗದಿಂದ ಬರುತ್ತಿದ್ದ ಬೈಕ್ ಸವಾರ ನಿಯಂತ್ರಣ ತಪ್ಪಿಸಿ ಮಹಿಳೆಗೆ ಡಿಕ್ಕಿ ಹೊಡೆದು ಪರಾರಿಯಾದ ಭೀಕರ ಅಪಘಾತ ಸಂಭವಿಸಿದೆ. 

 

ಸವಾರ ಸ್ಥಳದಿಂದ ಓಡಿಹೋದ ಹಿನ್ನೆಲೆಯಲ್ಲಿ ಸ್ಥಳೀಯರು ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.

 

ಅಪಘಾತದ ದೃಶ್ಯಗಳು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.