ಭದ್ರತಾ ಎಚ್ಚರಿಕೆಯಿಂದ ಜಮ್ಮು-ಕಾಶ್ಮೀರದ 48 ಪ್ರವಾಸಿ ತಾಣಗಳು ತಾತ್ಕಾಲಿಕವಾಗಿ ಬಂದ್!

  • 29 Apr 2025 03:22:15 PM


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಕೇಂದ್ರಾಡಳಿತ ಪ್ರದೇಶದ 87 ಪ್ರವಾಸಿ ತಾಣಗಳಲ್ಲಿ 48 ಸ್ಥಳಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ.

 

ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ, ಕಾರ್ಯಾಚರಣೆ ತೀವ್ರಗೊಂಡಿದ್ದು, ಸುರಕ್ಷತೆಯ ನಿಟ್ಟಿನಲ್ಲಿ ಈ ನಿರ್ಧಾರ ಕೈ ಕೊಳ್ಳಲಾಗಿದೆ.

 

 ಮುಚ್ಚಲಾದ ಪ್ರಮುಖ ತಾಣಗಳಲ್ಲಿ ಯೂಸ್ಮಾರ್ಗ್, ತೌಸಿಮೈದಾನ್, ದೂದ್ಪತ್ರಿ, ಬಂಗುಸ್, ಕರಿವಾನ್ ಡೈವರ್ ಚಂಡಿಗಮ್, ಅಹರ್ಬಲ್, ಕೌಸರ್ನಾಗ್, ವುಲರ್/ವಾಟ್ಲಾಬ್, ರಾಮ್ಪೋರಾ ಬಂಗುಸ್ ವ್ಯಾಲಿ, ರಾಜ್ಪೋರಾ ಹಾಗೂ ಚೀರ್‌ಹಾರ್ ಇತ್ಯಾದಿ ಸ್ಥಳಗಳು ಸೇರಿವೆ.

 

ತೆರೆದಿರುವ ಇತರ ಪ್ರವಾಸಿ ತಾಣಗಳಲ್ಲಿ ಭದ್ರತೆ ಕಟ್ಟುನಿಟ್ಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ವಾರದ ಹಿಂದಷ್ಟೇ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡರು.

 

 ಈ ದಾಳಿಗೆ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸಂಬಂಧಿಸಿದ 'ದಿ ರೆಸಿಸ್ಟೆನ್ಸ್ ಫ್ರಂಟ್' ಹೊಣೆ ಹೊತ್ತಿತ್ತು. ಆದರೆ ಈ ದಾಳಿಯ ಬಳಿಕ, "ನಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ದಾಳಿಯೊಂದಿಗೆ ನಮಗೂ ಯಾವುದೇ ಸಂಬಂಧವಿಲ್ಲ," ಎಂದು ಸಂಘಟನೆ ಸ್ಪಷ್ಟನೆಯನ್ನು ನೀಡಿರುತ್ತದೆ.