ಮರವೂರು ಸೇತುವೆ ಬಳಿ ಅಕ್ರಮ ಮರಳುಗಾರಿಕೆ;ಗಣಿ ಇಲಾಖೆ ಧಿಡೀರ್ ದಾಳಿ, 150 ಮೆಟ್ರಿಕ್ ಟನ್ ಮರಳು ಮತ್ತು ಯತ್ರೋಪಕರಣಗಳು ವಶಕ್ಕೆ!

  • 29 Apr 2025 03:40:12 PM

ಮಂಗಳೂರು: ಮರವೂರು ರೈಲ್ವೇ ಸೇತುವೆ ಬಳಿ ಅಕ್ರಮ ಮರಳುಗಾರಿಕೆಗೆ ತಡೆ ನೀಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸೋಮವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆದಾ ಳಿ ನಡೆಸಿದ್ದಾರೆ.

 

ಈ ಕಾರ್ಯಾಚರಣೆಯಲ್ಲಿ 150 ಮೆಟ್ರಿಕ್ ಟನ್ ಮರಳು, ಒಂದು ಟಿಪ್ಪರ್ ಹಾಗೂ ಇನ್ನಿತರ ಸುಮಾರು 5 ಲಕ್ಷ ರೂ. ಮೌಲ್ಯದ ಯಂತ್ರೋಪಕರಣಗಳು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. 

 

ದಾಳಿಯ ಸಂದರ್ಭ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ. ರೈಲ್ವೇ ಟ್ರ್ಯಾಕ್‌ನ ಕೆಳಭಾಗದಲ್ಲಿ ನಡೆಯುತ್ತಿದ್ದ ಈ ಕಾರ್ಯಚಟುವಟಿಕೆ ನಿಯಮ ಉಲ್ಲಂಘನೆಯಾಗಿರುತ್ತದೆ.

 

  ಸರ್ಕಾರದ ನಿಯಮದಂತೆ ಸೇತುವೆಯ ಎರಡೂ ಕಡೆಗೂ 100 ಮೀಟರ್ ವ್ಯಾಪ್ತಿಯಲ್ಲಿ ಮರಳು ತಗೆದುಕೊಳ್ಳುವುದು ಕಾನೂನುಬಾಹಿರವಾಗಿದೆ.

 

ಈ ಕಾರ್ಯಾಚರಣೆಯು ಉಪನಿರ್ದೇಶಕಿ ಎಂ.ಸಿ. ಕೃಷ್ಣವೇಣಿ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಗಣಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.