ಟರ್ಕಿ: ಟರ್ಕಿಯಿಂದ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳ ಕಳುಹಿಸುತ್ತಿರುವುದರ ಕುರಿತಂತೆ ಕಳೆದ ಕೆಲ ದಿನಗಳಿಂದ ಸುದ್ದಿಗಳು ಹರಿದಾಡುತ್ತಿದ್ದವು.
ಇದರ ಹಿನ್ನೆಲೆಯಲ್ಲಿ, ಟರ್ಕಿ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ. "ನಾವು ಪಾಕಿಸ್ತಾನಕ್ಕೆ ಯಾವುದೇ ಶಸ್ತ್ರಾಸ್ತ್ರಗಳನ್ನು ಕಳುಹಿಸಿಲ್ಲ" ಎಂದು ತಿಳಿಸಿದೆ.
ಹಲವಾರು ಸುದ್ದಿ ವಾಹಿನಿಗಳು ಟರ್ಕಿಯಿಂದ ಪಾಕಿಸ್ತಾನಕ್ಕೆ ಆರು ಶಸ್ತ್ರಾಸ್ತ್ರ ವಿಮಾನಗಳು ತೆರಳಿವೆ ಎಂಬುದಾಗಿ ವರದಿ ಮಾಡಿದ್ದವು.
ಅದರ ಕುರಿತಾಗಿ ಸೋಮವಾರ ಟರ್ಕಿ ಅಧ್ಯಕ್ಷೀಯ ಸಂವಹನ ನಿರ್ದೇಶನಾಲಯ ಸ್ಪಷ್ಟನೆ ನೀಡಿರುತ್ತದೆ.
ಟರ್ಕಿಯಿಂದ ಹೊರಟ ಸರಕು ವಿಮಾನವು ಇಂಧನ ತುಂಬಿಸಿಕೊಳ್ಳಲು ಪಾಕಿಸ್ತಾನದ ಏರ್‌ಪೋರ್ಟ್‌ನಲ್ಲಿ ಇಳಿದಿದ್ದೆಂದೂ ಅದರ ನಂತರ ಪ್ರವಾಸ ಮುಂದುವರಿಸಿದೆ ಎಂದು ತಿಳಿಸಿದೆ.
ಸರಕಾರಿ ಸಂಸ್ಥೆಗಳಿಂದ ಹೊರತುಪಡಿಸಿ ಇತರ ಮೂಲಗಳಿಂದ ಬರುವ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂಬ ಸೂಚನೆಯನ್ನು ಸಹ ನೀಡಿದೆ.
ಪಾಕ್ ನ ಕರಾಚಿ ವಿಮಾನ ನಿಲ್ದಾಣದಲ್ಲಿ ಟರ್ಕಿಶ್ ಸಿ–130 ಹರ್ಕ್ಯುಲಸ್ ಮಿಲಿಟರಿ ವಿಮಾನ ಇಳಿದಿರುವ ಬಗ್ಗೆ ಕೆಲವು ವರದಿಗಳಲ್ಲಿ ಉಲ್ಲೇಖವಾಗಿತ್ತು.
ಟರ್ಕಿಯ ಅಧಿಕೃತ ಸಂಸ್ಥೆಗಳು ವಿಮಾನದ ಚಿತ್ರವೊಂದನ್ನು ಬಿಡುಗಡೆ ಮಾಡಿ, ಈ ಹೇಳಿಕೆಗಳನ್ನು ತಳ್ಳಿಹಾಕಿ ತಮ್ಮ ನಿಲುವನ್ನು ಮತ್ತಷ್ಟು ದೃಢಪಡಿಸಿರುತ್ತಾರೆ.