ಎಡನೀರು ಮಠ, ಕೊಂಡೆವೂರು ಯೋಗಾಶ್ರಮ ಮತ್ತು ಹಿಂದೂ ಸಂಘಟನೆಗಳ ಆಶ್ರಯದಲ್ಲಿ ಪಾಹಲ್ಗಮ್ ಹುತಾತ್ಮರಿಗೆ ನುಡಿನಮನ ಹಾಗೂ ದುಷ್ಟಶಕ್ತಿಗಳ ವಿರುದ್ಧ ಐಲದಲ್ಲಿ ಮೇ 4ರಂದು ಹಿಂದೂ ಜಾಗೃತಿ ಸಮಾವೇಶ

  • 29 Apr 2025 07:46:20 PM

ಎಡನೀರು: ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಮ್ ಎಡನೀರು ಮಠದ ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆವೂರು ಮಠ ಹಾಗೂ ವಿವಿಧ ಹಿಂದೂ ಸಂಘಟನೆಗಳ ಆಶ್ರಯದಲ್ಲಿ 'ಕಾಶ್ಮೀರ ಹುತಾತ್ಮರಿಗೆ ನುಡಿ ನಮನ ಮತ್ತು ಹಿಂದೂ ಜಾಗೃತಿ ಸಮಾವೇಶ ಏರ್ಪಡಿಸಲಾಗಿದೆ.

 

ಭಾರತದ ಮುಕುಟಮಣಿ ಕಾಶ್ಮೀರ ದ ಪಾಹಲ್ಗಮ್ ನಲ್ಲಿ 22/4/2025ರ೦ದು ನಡೆದ ಪಾಕಿಸ್ಥಾನಿ ಪ್ರೇರಿತ ದುಷ್ಟಭಯೋತ್ಪಾದಕರಿ೦ದ ನಡೆದ ಅಮಾಯಕ ಹಿ೦ದೂಗಳ ಭೀಕರ ನರಮೇಧವನ್ನು ಖ೦ಡಿಸಿ ಕಾಸರಗೋಡು ಹಾಗೂ ಮ೦ಜೇಶ್ವರ ತಾಲೂಕಿನ ಎಲ್ಲಾ ಪಂಚಾಯತ್ ಗಳ ಸರ್ವ ದೇಶ ಭಕ್ತ ಹಿ೦ದೂ ಶಕ್ತಿಗಳ ಒಗ್ಗೂಡುವಿಕೆಯೊ೦ದಿಗೆ ಪರಮ ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ದಿನಾಂಕ 4/5/2025 ರಂದು ಸಂಜೆ 4.00 ಗಂಟೆಗೆ ಸರಿಯಾಗಿ ಐಲ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರದ ಉತ್ಸವಾಂಗಣವಾದ ಐಲ ಮೈದಾನದಲ್ಲಿ ವಿರಾಟ್ ಹಿಂದೂ ಸಂಗಮದ ಅಭೂತ ಪೂರ್ವ ಕಾರ್ಯಕ್ರಮ ನಡೆಯಲಿದೆ.

 

ಈ ವಿರಾಟ್ ಹಿಂದೂ ಸಂಗಮದಲ್ಲಿ, ಎಲ್ಲ ಧರ್ಮ ನಿಷ್ಠರಾದ ಹಿಂದೂ ಬಾಂಧವರು ಭಾಗವಹಿಸಿ, ಸಮಾವೇಶವನ್ನು ಯಶಸ್ವಿಯಾಗಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.