ಮಂಗಳೂರು: ಮಂಗಳೂರು ನಗರದ ಪ್ರಮುಖ ಸಂಪರ್ಕ ಮಾರ್ಗವಾಗಿ ಸೇವೆ ಸಲ್ಲಿಸುತ್ತಿರುವ ನೇತ್ರಾವತಿ ಸೇತುವೆ, ಮೇ 2ರಿಂದ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಘೋಷಿಸಿದ್ದಾರೆ.
ಇದರಿಂದ ನಗರ ಹಾಗೂ ಸುತ್ತಮುತ್ತಲ ಪ್ರದೇಶದ ಸಾರಿಗೆ ಸುಗಮವಾಗಲಿದ್ದು, ಸಾರ್ವಜನಿಕರಿಗೆ ದಿನ ನಿತ್ಯ ಸಂಚಾರಕ್ಕೆ ಮತ್ತಷ್ಟು ಸುಧಾರಣೆಯಾಗಲಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ, ಸೇತುವೆಯ ದುರಸ್ತಿ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು ಹೊಸ ಬೇರಿಂಗ್‌ಗಳನ್ನು ಕಂಬಗಳಿಗೆ ಅಳವಡಿಸಲಾಗಿದ್ದು, ತಾಂತ್ರಿಕವಾಗಿ ಅಗತ್ಯವಿದ್ದ ಎಲ್ಲ ಪರಿಹಾರ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಸುರಕ್ಷತೆ, ಸ್ಥಿರತೆ ಮತ್ತು ದೀರ್ಘಕಾಲಿಕ ಸೇವೆಗಾಗಿ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ.
ಸೇತುವೆಯ ಕಾಂಕ್ರೀಟ್ ಕ್ಯೂರಿಂಗ್ ಪ್ರಕ್ರಿಯೆ ಈಗ ನಡೆಯುತ್ತಿದ್ದು, ಇದು ಇನ್ನೂ ಎರಡು ದಿನಗಳನ್ನು ಹಿಡಿಯಲಿರುವ ನಿರೀಕ್ಷೆಯಿದೆ.