ಎಡನೀರು ಶ್ರೀಗಳ ವಾಹನಕ್ಕೆ ಅಡ್ಡಿ - ಖಂಡನೆ - ಸುರೇಶ್ ಶೆಟ್ಟಿ ಪರಂಕಿಲ

  • 05 Nov 2024 02:52:16 PM

ಮಂಜೇಶ್ವರ - ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸಂಚರಿಸುತಿದ್ದ ವಾಹನಕ್ಕೆ ಕಿಡಿಗೇಡಿಗಳು ತಡೆಯೊಡ್ಡಿ ಕೃತ್ಯ ಎಸಗಿದ ಘಟನೆಯನ್ನು ವಿಶ್ವ ಹಿಂದೂ ಪರಿಷದ್ ಬಲವಾಗಿ ಖಂಡಿಸುತ್ತದೆ. ಪೂಜ್ಯ ಸಾಧು ಸಂತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ 


ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷದ್ ಕೇರಳ ಕಣ್ಣೂರು ವಿಭಾಗ ಸೇವಾ ಪ್ರಮುಖ ಸುರೇಶ್ ಶೆಟ್ಟಿ ಪರಂಕಿಲ ಕೇರಳ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಅವರಿಗೆ ತಕ್ಷಣ ದಿಂದ ಗನ್ ಮ್ಯಾನ್  ಭದ್ರತೆ ಮತ್ತು ಪೊಲೀಸ್ ರಕ್ಷಣೆ  ನೀಡಬೇಕು.