ಕಾಸರಗೋಡು ಉಪ್ಪಳ ಗೇಟ್ ಬಳಿ ಕಾರ್ ಆಟೋ ನಡುವೆ ಭೀಕರ ಅಪಘಾತ: ಆಟೋ ಚಾಲಕ ಸಾವು!

  • 01 May 2025 06:26:46 PM

ಕಾಸರಗೋಡು : ಕಾಸರಗೋಡಿನ ಉಪ್ಪಳ ಗೇಟ್ ಬಳಿ ಬುಧವಾರ ಸಂಜೆ ಕಾರು ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋ ಚಾಲಕ ಮೃತಪಟ್ಟ ಭೀಕರ ಘಟನೆ ಸಂಭವಿಸಿದೆ. 

 

ಮೃತ ವ್ಯಕ್ತಿಯನ್ನು ಕಾಞಾಂಗಾಡ್ ನಿವಾಸಿ ಮೋಹನ್ ಎಂದು ಗುರುತಿಸಲಾಗಿದೆ.

 

ಅಪಘಾತದಲ್ಲಿ ಮೋಹನ್ ಅವರು ಚಲಾಯಿಸುತ್ತಿದ್ದ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿಗೂ ಗಂಭೀರ ಹಾನಿ ಉಂಟಾಗಿದೆ ಎನ್ನಲಾಗಿದೆ. 

 

ಕಾರಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದ ತೀವ್ರತೆ ಗಂಭೀರವಾಗಿತ್ತು.

 

ಅಪಘಾತದ ನಂತರ ಆಟೋ ರಿಕ್ಷಾದೊಳಗೆ ಸಿಲುಕಿದ್ದ ಮೋಹನ್ ಅವರನ್ನು ಸ್ಥಳೀಯರು ಮತ್ತು ಪೊಲೀಸರು ಹೊರತೆಗೆದು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ದರು ಆದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. 

 

ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.