ಕುವೈಟ್: ಭಾರತೀಯ ಪ್ರವಾಸಿ ಪರಿಷತ್ ಕುವೈಟ್ – ಕರ್ನಾಟಕ ವಿಭಾಗ ಆಯೋಜಿಸಿದ್ದ ‘ಕರುನಾಡ ಡಿಂಡಿಮ’ ಕಾರ್ಯಕ್ರಮದಲ್ಲಿ ಭಾಗವಹಿಸಲು ನಮ್ಮ ಹೆಮ್ಮೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕುವೈಟ್‌ಗೆ ಆಗಮಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಉತ್ತೇಜಿಸುವ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕೇವಲ ರಜಾ ದಿನಗಳಲ್ಲಿ ತಮ್ಮೂರಿಗೆ ಮರಳುವ ಬದಲು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ 'ವಿಕಸಿತ ಭಾರತ'ದ ಕನಸಿಗೆ ಬೆಂಬಲ ನೀಡುವುದರ ಕುರಿತಾಗಿ ಮತ್ತು
ತಮ್ಮ ಊರಿನ ಅಭಿವೃದ್ಧಿಗೆ ನಿರಂತರವಾಗಿ ಕೈಜೋಡಿಸುವುದು ಅವಶ್ಯಕವಾಗಿದೆ ಎಂಬ ಸಂದೇಶವನ್ನು ಕೂಡ ಅವರು ನೀಡಿದರು.
‘ಬ್ಯಾಕ್ ಟು ಊರು’ ಎಂಬ ಅಭಿಯಾನದ ಮಹತ್ವವನ್ನು ಹಂಚಿಕೊಳ್ಳಲು ಹಾಗೂ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು ತಮ್ಮ ಮೂಲ ಊರಿಗೆ ಸೆಳೆಯುವ ನಿಟ್ಟಿನಲ್ಲಿ ಸಂಸದರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.
ದೇಶ – ವಿದೇಶದಲ್ಲಿ ಯಶಸ್ಸು ಗಳಿಸಿದ ನಮ್ಮೂರಿನವರನ್ನು ಮಂಗಳೂರಿಗೆ ಮರಳಿಸುವ ಮೂಲಕ ಇಲ್ಲಿನ ಅಭಿವೃದ್ಧಿಗೆ ಅವರು ಸಹಭಾಗಿಯಾಗಬೇಕು ಎಂಬುದು ಈ ಪ್ರಯತ್ನದ ಉದ್ದೇಶವಾಗಿರುತ್ತದೆ.