ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣ – ಎಂಟು ಮಂದಿ ಬಂಧನ

  • 03 May 2025 03:01:25 PM

ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಮುಂದುವರೆಸಿದ್ದು, ಈವರೆಗೆ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ದೊರಕಿದೆ.

 

 

ಪೊಲೀಸರ ಪ್ರಕಾರ, ಖಲಂದರ್ ಶಾಫಿ, ಅಬ್ದುಲ್ ಸಫ್ವಾನ್, ನಿಯಾಜ್, ಮಹಮ್ಮದ್ ಮುಜಾಮಿಲ್, ರಂಜಿತ್, ಆದಿಲ್ ಮೆಹ್ರೂಪ್, ರಿಜ್ವಾನ್ ಮತ್ತು ನಾಗರಾಜ್ ಆರೋಪಿಗಳಾಗಿ ಬಂಧನಕ್ಕೊಳಗಾಗಿದ್ದಾರೆ.

 

 ಪೊಲೀಸರು ಈ ಕುರಿತು ಮಾಹಿತಿ ನೀಡಿರುವ ಕಮಿಷನರ್ ಅನುಪಮ್ ಅಗರ್ವಾಲ್, ಪ್ರಕರಣದ ಹಿಂದಿನ ಹಿನ್ನೆಲೆ ವಿವರಿಸಿದ್ದಾರೆ.

 

ಹಿಂದಿನ ದ್ವೇಷದಿಂದ ಕೊಲೆಗೂಡಿ

ಅವರ ಪ್ರಕಾರ 2023ರಲ್ಲಿ ಸುಹಾಸ್ ಶೆಟ್ಟಿ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಇದರಿಂದ ಆತಂಕಗೊಂಡ ಸಫ್ವಾನ್, ಸುಹಾಸ್‌ನನ್ನು ಕೊಲೆ ಮಾಡಲು ಯೋಜನೆ ರೂಪಿಸಿ, ಫಾಜಿಲ್‌ನ ತಮ್ಮ ಆದಿಲ್ ಸಂಪರ್ಕಿಸಿಕೊಂಡು ಸ್ಕೆಚ್ ಹಾಕಿದ. ಈ ಹತ್ಯೆಗಾಗಿ ಐದು ಲಕ್ಷ ರೂ. ಮೊತ್ತವೂ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

 

 

ಚಿಕ್ಕಮಗಳೂರಿನಿಂದ ನಿಯಾಜ್ ಸ್ನೇಹಿತರಾದ ರಂಜಿತ್ ಹಾಗೂ ನಾಗರಾಜ್ ಹತ್ಯೆಗೆ ನೇಮಕವಾಗಿದ್ದು, ಸಫ್ವಾನ್‌ನ ಮನೆಯಲ್ಲಿ ಇಬ್ಬರೂ ಎರಡು ದಿನ ವಾಸವಿದ್ದು, ಸುಹಾಸ್‌ನ ಚಲನವಲನಗಳ ಮೇಲ್ವಿಚಾರಣೆ ನಡೆಸಿ ಬಳಿಕ ಪ್ಲ್ಯಾನಿಂಗ್ ಪ್ರಕಾರವೇ ಕೊಲೆ ನಡೆಯಿತು ಎಂಬುದಾಗಿ ತಿಳಿದು ಬಂದಿದೆ.

 

 ಬರ್ಖಾ ಧಾರಿದಾರಿಯಾದ ಮಹಿಳೆ ನಿಯಾಜ್ ಸಂಬಂಧಿಯಾಗಿರ ಬಹುದೆಂಬ ಮಾಹಿತಿ ಲಭಿಸಿದ್ದು, ಈ ಕುರಿತು ತನಿಖೆ ಮುಂದುವರೆದಿದೆ.