ಪೆರ್ಲ : ಇತಿಹಾಸ ಪ್ರಸಿದ್ಧ ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮೇ 6ರಿಂದ 12ರ ತನಕ ಜರಗಲಿದೆ.
ಇದರ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರಿಗೆ ನೀಡಿ ಸಮಿತಿ ಪದಾಧಿಕಾರಿಗಳು ಅನುಗ್ರಹ ಪಡೆದುಕೊಂಡರು.
ಕುಕ್ಕೆಗೆ ಸಾಟಿಯಾದ ಕಾಟುಕುಕ್ಕೆಯ ಬ್ರಹ್ಮಕಲಶೋತ್ಸವದ ಕಾರ್ಯ ವೈಖರಿಗಳನ್ನು ತಿಳಿದುಕೊಂಡ ಧರ್ಮಾಧಿಕಾರಿಗಳು ಧರ್ಮಸ್ಥಳ ಕ್ಷೇತ್ರದ ವತಿಯಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ಕೆ ಎರಡು ಲಕ್ಷ ರೂ. ಸಹಾಯಧನ ನೀಡುವುದಾಗಿ ಹೇಳಿದರು.
ಕ್ಷೇತ್ರ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಕೋಶಾಧಿಕಾರಿ ತಾರನಾಥ ರೈ ಪಡ್ಡಂಬೈಲು ಗುತ್ತು, ಬ್ರಹ್ಮಕಲಶೋತ್ಸವ ಮಾತೃ ಸಂಘದ ಅಧ್ಯಕ್ಷೆ ಸಾಹಿತಿ ರಾಜಶ್ರೀ ಟಿ.ರೈ, ಟ್ರಸ್ಟಿಗಳಾದ ಸುಧಾಕರ ಕಲ್ಲಗದ್ದೆ,ಚನಿಯಪ್ಪ ಪರಗುಡ್ಡೆ, ರಿತೇಶ್ ಕಿರಣ್ ಕಾಟುಕುಕ್ಕೆ, ಪ್ರಚಾರ ಸಮಿತಿ ಸಂಚಾಲಕ ಜಯ ಮಣಿಯಂಪಾರೆ, ಹರ್ಷ ರೈ ಪುತ್ರಕಳ,ಧ್ರುವ ಕಾರ್ತಿಕೇಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.