ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಮತ್ತೊಬ್ಬ ಹಿಂದೂ ಕಾರ್ಯಕರ್ತನಿಗೆ ಜೀವ ಬೆದರಿಕೆ!

  • 04 May 2025 04:33:22 PM

ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಇನ್ನೂ ಚರ್ಚೆಯಲ್ಲಿರುವಾಗಲೇ ಮತ್ತೊಬ್ಬ ಹಿಂದೂ ಕಾರ್ಯಕರ್ತನಿಗೆ ಸಾಮಾಜಿಕ ಜಾಲತಾಣದ ಮೂಲಕ ಜೀವ ಬೆದರಿಕೆ ಹಾಕಿರುವುದು ಆತಂಕವನ್ನು ಉಂಟುಮಾಡಿದೆ. 

 

ಈ ಬೆದರಿಕೆಯ ಪೋಸ್ಟ್ ವೈರಲ್ ಆಗಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

 

 

ಹಿಂದೂ ಕಾರ್ಯಕರ್ತ ಭರತ್ ಕುಮ್ಮೇಲು ಅವರಿಗೆ “ಮೇ 5ರ ರಾತ್ರಿ 9:30ಕ್ಕೆ ನಿನ್ನ ಸ್ಥಳದಲ್ಲೇ ಬಂದು ಕೊ*ಲೆ ಮಾಡುತ್ತೇವೆ” ಎಂಬ ಶಬ್ದಗಳಿರುವ ಜೀವ ಬೆದರಿಕೆ ಪೋಸ್ಟ್ ಹಾಕಿದ್ದಾರೆ. 

 

ಈ ಪೋಸ್ಟ್‌ನಲ್ಲಿ ಸುಹಾಸ್ ಶೆಟ್ಟಿ ಅವರ ಫೋಟೋಗೆ ಟಿಕ್ ಮಾರ್ಕ್ ಹಾಕಿ, ಭರತ್ ಅವರ ಫೋಟೋವನ್ನೂ ಜೊತೆಗೆ ಹಾಕಲಾಗಿದೆ.

 

 

ಭರತ್ ಕುಮ್ಮೇಲು ಈಗಾಗಲೇ ಎಸ್‌ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿ ಹೆಸರು ಹೊಂದಿದ್ದಾರೆ. ಈ 

ಹಿನ್ನೆಲೆಯಲ್ಲಿಯೇ ಈ ಹೊಸ ಜೀವ ಬೆದರಿಕೆ ಆತಂಕವನ್ನು ಸೃಷ್ಟಿಸಿದೆ.

 

ಸುಹಾಸ್ ಹತ್ಯೆ ಬಳಿಕ ಶರಣ್ ಪಂಪ್ ವೆಲ್ ಸೇರಿದಂತೆ ಇತರ ಹಿಂದೂ ಮುಖಂಡರುಗೂ ಜೀವ ಬೆದರಿಕೆ ಬಂದಿರುವ ಮಾಹಿತಿ ದೊರಕಿದೆ. 

 

ವೈರಲ್ ಆಗಿರುವ ಈ ಪೋಸ್ಟ್‌ಗಳನ್ನು ಗಂಭೀರವಾಗಿ ಪರಿಗಣಿಸುವಂತೆ, ಹಾಗೂ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಪೊಲೀಸರಿಗೆ ಒತ್ತಾಯಿಸಿದ್ದಾರೆ.