ಉಡುಪಿ: ಸುಹಾಸ್ ಶೆಟ್ಟಿ ಮನೆಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಬೇಟಿ; NIA ತನಿಖೆಗೆ ಕೇಂದ್ರಕ್ಕೆ ಆಗ್ರಹ!

  • 04 May 2025 06:27:40 PM

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು, ಹಿಂದೂ ಕಾರ್ಯಕರ್ತನಾಗಿದ್ದ ಸುಹಾಸ್ ಶೆಟ್ಟಿ ಯವರ ಮನೆಗೆ ಬೇಟಿ ನೀಡಿ, ಅವರ ತಂದೆ ತಾಯಿಗೆ ಸಾಂತ್ವನ ಹೇಳಿದರು. 

 

 

ಕೋಟ ಶ್ರೀನಿವಾಸ್ ಪೂಜಾರಿ ಅವರು, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗೆ ಹಸ್ತಾಂತರಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸುವುದಾಗಿ ತಿಳಿಸಿದರು. "ಈ ಪ್ರಕರಣಕ್ಕೆ ನಿಖರ ತನಿಖೆ ಆಗಬೇಕು, ಸತ್ಯ ಹೊರ ಬರಬೇಕು. ಯಾವ ಕಾರಣಕ್ಕೂ ಇಂತಹ ಘಟನೆಗಳು ಮರುಕಳಿಸಬಾರದು" ಎಂಬುದಾಗಿ ಅವರು ಹೇಳಿದ್ದಾರೆ.

 

ಈ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನ್ಯಾಕ್ ಉಳಿಪ್ಪಾಡಿ ಅವರು ಕೂಡ ಉಪಸ್ಥಿತರಿದ್ದರು.